ನ್ಯೂಸ್ ನಾಟೌಟ್: ಬೆಂಗಳೂರು ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿಯ ಟ್ಯಾಕ್ಸಿ ಪಾರ್ಕಿಂಗ್ ಸ್ಥಳದಲ್ಲಿ ಐದು ವರ್ಷದ ಬಾಲಕಿಯ ಮೃತದೇಹ ಇತ್ತೀಚೆಗೆ ಪತ್ತೆ ಆಗಿತ್ತು. ಇದೀಗ ರೈಲ್ವೆ ಪೊಲೀಸರು ಕೊಲೆಯಾದ ಬಾಲಕಿಯ ಗುರುತು ಪತ್ತೆ ಹಚ್ಚಿದ್ದಾರೆ. ಮರಿಯಮ್ ಮೃತ ಐದು ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ.
ಕೊಲೆಯಾದ ಮರಿಯಮ್ ಶಿವು-ಹೀನಾ ದಂಪತಿಯ ಪುತ್ರಿ. ಬಾಲಕಿಯ ಕೊಲೆಯ ಸುತ್ತ ಪೋಷಕರ ವಿರುದ್ಧವೇ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದವು. ರಾಜು ಎಂಬಾತನ ಜೊತೆ ಹೀನಾ ಅನೈತಿಕ ಸಂಬಂಧ ಹೊಂದಿದ್ದು, ಪತಿ ಶಿವುನನ್ನು ಬಿಟ್ಟು ರಾಜು ಜೊತೆ ಭಿಕ್ಷಾಟನೆ ಮಾಡುತ್ತಿದ್ದಳು. ಇವರಿಬ್ಬರ ಜೊತೆಯೇ ಕೊಲೆಯಾದ ಬಾಲಕಿ ಮರಿಯಮ್ ಇರುತ್ತಿದ್ದಳು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂದು ಪ್ರಿಯಕರ ರಾಜು ಜತೆ ಸೇರಿಕೊಂಡು ಮಗಳನ್ನು ಕೊಲೆಗೈದಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಶವ ಪತ್ತೆಯಾದ ದಿನದಿಂದಲೂ ಹೀನಾ ಮತ್ತು ರಾಜು ನಾಪತ್ತೆಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಹೀನಾ ಹಾಗೂ ರಾಜು ಮೇಲೆ ಸಾಕಷ್ಟು ಅನುಮಾನ ಮೂಡಿದೆ. ಹೀಗಾಗಿ ಇವರಿಬ್ಬರಿಗಾಗಿ ರೈಲ್ವೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೃತ ಬಾಲಕಿಯ ಮೈಮೇಲೆ ಪರಚಿದ ಗಾಯಗಳು ಮತ್ತು ರಕ್ತದ ಕಲೆಗಳು ಕಂಡುಬಂದಿದ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿತ್ತು. ಈಗ ಪೊಲೀಸರು ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.
Click 👇