ನ್ಯೂಸ್ ನಾಟೌಟ್: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮನ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬೆಳಗಾವಿಯ ಕಂಗ್ರಾಳಿ ಕೆ.ಹೆಚ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಲತಾಯಿ ಸಪ್ನಾ ನಾವಿ ಮೂರು ವರ್ಷದ ಸಮೃದ್ಧಿ(3) ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇಂದು(ಮೇ.20) ಬೆಳಗ್ಗೆ ಮಗುವಿನ (baby) ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಮೃತ ಸಮೃದ್ದಿ ಅಜ್ಜಿ ಹಾಗೂ ಚಿಕ್ಕಪ್ಪನಿಂದ ಸಪ್ನಾ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ಕೊಲೆ ಮಾಡಿದ ಬಳಿಕ ವಾಂತಿ ಮಾಡಿಕೊಂಡು ಮಗು ಮೃತಪಟ್ಟಿದೆ ಎಂದು ಸಪ್ನಾ ಫೋನ್ ಮಾಡಿದ್ದಳು ಎನ್ನಲಾಗಿದೆ. ಸಿಆರ್ಪಿಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿರುವ ರಾಯಣ್ಣ ನಾವಿ ಮೊದಲ ಪತ್ನಿ ನಿಧನದಿಂದಾಗಿ ಎರಡನೇ ಮದುವೆಯಾಗಿದ್ದರು ಎನ್ನಲಾಗಿದೆ.
ಅವಳನ್ನ ಕೊಲೆ ಮಾಡಬೇಕಿದ್ರೇ ಯಾವಾಗಲೋ ಮಾಡಬಹುದಿತ್ತು, ತನ್ನ ಮಗುವಿನಂತೆ ಜೋಪಾನ ಮಾಡಿದ್ದೇನೆ. ತನಗೆ ಅವಳ ಜವಳಿ ಮಕ್ಕಳಾಗಿ ಮೃತಪಟ್ಟಿದ್ದು ಗರ್ಭಪಾತ ಮಾಡಿಸಿಕೊಂಡು ಸಮೃದ್ಧಿಯನ್ನ ಜೋಪಾನ ಮಾಡಿಕೊಂಡು ಬರ್ತಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನ ಪೋಷಣೆ ಮಾಡಿಕೊಂಡು ಬಂದಿದ್ದು ಎಲ್ಲ ವಿಚಾರವನ್ನ ಗಂಡನ ಗಮನಕ್ಕೆ ತಂದಿದ್ದೇನೆ ಅಂತಾ ಸಪ್ನ ಹೇಳ್ತಿದ್ದಾರೆ ಎನ್ನಲಾಗಿದೆ. ಪೊಲೀಸರ ತನಿಖೆಯ ಬಳಿಕ ಸತ್ಯಾಸತ್ಯತೆ ಹೊರಬರಬೇಕಿದೆ. ಮಗುವಿನ ಮಲತಾಯಿ ಸಪ್ನಾ ನೇರವಾಗಿ ಎಪಿಎಂಸಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಸಪ್ನಾ ಬಾಲಕಿಯ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ವಿಡಿಯೋವನ್ನು ತನ್ನ ಪತಿ ಸಿಆರ್ ಪಿ ಎಫ್ ಯೋಧ ಛತ್ತಿಸಘಡದಲ್ಲಿರುವ ರಾಯಣ್ಣನಿಗೆ ಕಳಿಸಿದ್ದಾರೆ. ಬಾಲಕಿ ರಾತ್ರಿ ಇಡೀ ವಾಂತಿ ಭೇದಿ ಮಾಡಿಕೊಳ್ಳುವುದು ಹಾಗೂ ಬೇರೆ ಬೇರೆ ಸಮಯದಲ್ಲಿ ಆರೋಗ್ಯದ ತೊಂದರೆಯಿಂದ ಬಳಲ್ತಿರೋ ವಿಡಿಯೋಗಳು ಮತ್ತು ಆಸ್ಪತ್ರೆಗೆ ತೋರಿಸಿದ ಚೀಟಿಗಳು ಸಮೃದ್ಧಿಯ ಎರಡನೇ ತಾಯಿ ಸಪ್ನಾ ಬಳಿ ಇವೆ ಎನ್ನಲಾಗಿದೆ.
Click 👇