ನ್ಯೂಸ್ ನಾಟೌಟ್: ಬೇಸಿಗೆಯ ತಾಪಕ್ಕೆ ತತ್ತರಿಸುತ್ತಿರುವ ಜನತೆ ತಾಪ ತಣಿಸಲು ಕೋಲ್ಟ್ ಡ್ರಿಂಗ್ಸ್, ಎಳನೀರು, ಐಸ್ಕ್ರೀಂಗಳ ಮೊರೆ ಹೋಗುವುದು ಈಗ ಸಾಮಾನ್ಯವಾಗಿದೆ. ಆದರೆ, ಮುಂಬೈನ ನಿವಾಸಿಯೊಬ್ಬರು 45 ದಿನಗಳಲ್ಲಿ 300 ಐಸ್ಕ್ರೀಂಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿ, ಸುದ್ದಿಯಾಗಿದ್ದಾರೆ..!
ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಈ ಮಾಹಿತಿ ನೀಡಿದ್ದು, ಈ ವರ್ಷ ತಾಪ ಹೆಚ್ಚಿರುವ ಕಾರಣ ಐಸ್ಕ್ರೀಂನ ಬೇಡಿಕೆ ಕೂಡ ಕಳೆದ ವರ್ಷಕ್ಕಿಂತ ಶೇ.16ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಮಾ.1ರಿಂದ ಏ.15ರ ಅವಧಿಯಲ್ಲಿ ಬೆ.11ರಿಂದ ಸಂಜೆ 4ಗಂಟೆವರೆಗೆ 4.6 ಲಕ್ಷ ಐಸ್ಕ್ರೀಂ, ಸಂಜೆ 7 ರಿಂದ ಮಧ್ಯರಾತ್ರಿವರೆಗೆ 6.9 ಲಕ್ಷ ಐಸ್ಕ್ರೀಂಗಳನ್ನು ಸ್ವಿಗ್ಗಿಯಿಂದ ಬುಕ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಬೆ.7ರಿಂದ 11ರವರೆಗೆ 80,000 ಐಸ್ಕ್ರೀಂ ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ಮಾಹಿತಿ ಹಂಚಿಕೊಂಡಿದೆ. ಇದರಲ್ಲಿ ಮುಂಬೈನ ನಿವಾಸಿಯೊಬ್ಬರು 45 ದಿನಗಳಲ್ಲಿ 300 ಐಸ್ಕ್ರೀಂಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದು ಅಚ್ಚರಿ ಮೂಡಿಸಿದೆ.