27.7 C
Sullia
Sunday, March 8, 2026

ಕೊಡಗು: ಗಣತಿ ವೇಳೆ ಎದುರಾದ ಕಾಡಾನೆಗೆ ಹೆದರಿದ ಶಿಕ್ಷಕ: ಬೈಕಿನಿಂದ ಜಾರಿ ಬಿದ್ದು ಗಾಯ

ನ್ಯೂಸ್ ನಾಟೌಟ್ : ಸಿದ್ದಾಪುರ (ಕೊಡಗು): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳುತ್ತಿದ್ದ ಗೋಣಿಕೊಪ್ಪಲು ಪ್ರೌಢಶಾಲಾ ಶಿಕ್ಷಕರೋರ್ವರಿಗೆ ಆನೆಯೊಂದು ಎದುರು ಕಂಡಿದ್ದು,ಇದರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ
ಬೈಕ್‌ನಿಂದ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಶಿವಾರಂ ಅವರ ಕಾಲಿಗೆ ಗಾಯವಾಗಿದ್ದು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಮೀಕ್ಷೆ ಸಲುವಾಗಿ ಮಾಲ್ದಾರೆ ಸಮೀಪದ ಅವರೆಗುಂದ ಹಾಡಿಗ ಅವರು ತೆರಳಿದ್ದರು. ಬಸವನಹಳ್ಳಿ ಮಾರ್ಗವಾಗಿ ದುಬಾರೆ ಹಾಡಿಗೆ ತೆರಳುವಾಗ ಕಾಡಾನೆ ಎದುರಾಗಿತ್ತು.

ಗಾಬರಿಗೊಂಡು ಬೈಕ್‌ನಲ್ಲಿ ವೇಗವಾಗಿ ತೆರಳಲು ಯತ್ನಿಸಿದಾಗ ಕೆಸರಿನ ರಸ್ತೆಯಲ್ಲಿ ಜಾರಿ ಬಿದ್ದರು.ನಂತರ ಸ್ವಲ್ಪ ದೂರ ಓಡಿ ಪಾರಾದರು. ವಿರಾಜಪೇಟೆ ತಹಶೀಲ್ದಾರ್ ಪ್ರವೀಣ್ ಕುಮಾರ್ ಹಾಗೂ ಕಂದಾಯ ಪರಿವೀಕ್ಷಕ ಅನಿಲ್‌ ಕುಮಾ‌ ಆಸ್ಪತ್ರೆಗೆ ಭೇಟಿ ನೀಡಿದ್ದರು.

Related Articles

LEAVE A REPLY

Please enter your comment!
Please enter your name here

Latest Articles