ನ್ಯೂಸ್ ನಾಟೌಟ್ : ಅಚ್ಚರಿಯ ಘಟನೆಗೆ ಕಾರ್ಕಳ ಸಾಕ್ಷಿಯಾಗಿದೆ. ಕಳೆದ 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಕಾರ್ಕಳದ
ಯುವಕ ಬೆಂಗಳೂರಿನಲ್ಲಿ ಬುಧವಾರ ಪತ್ತೆಯಾಗಿದ್ದು, ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ.
ಪ್ರಭಾಕರ ಪ್ರಭುರವರ ಪುತ್ರ ಅನಂತ ಕೃಷ್ಣ ಪ್ರಭು (16),
ಮುಂಡ್ಯೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ
ವಿದ್ಯಾರ್ಥಿಯಾಗಿದ್ದು, 06/12/2012 ರಂದು ಮನೆಯಿಂದ
ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ವಾಪಸ್ಸಾಗದೇ
ಕಾಣೆಯಾಗಿದ್ದರು. ಈ ಬಗ್ಗೆ ದೂರು ನೀಡಲಾಗಿತ್ತು.
ಯುವಕನ ತಂದೆಯ ದೂರಿನ ಮೇಲೆ
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಿ, ವಿವಿಧ
ಆಯಾಮಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ತನಿಖಾ ತಂಡವು
ಪರಿಶೀಲನೆ ಮಾಡಿ, ಅನಂತ ಕೃಷ್ಣ ಪ್ರಭು (29) ಈಗ ಬೆಂಗಳೂರಿನಲ್ಲಿ
ವಾಸಿಸುತ್ತಿರುವುದನ್ನು ದೃಢಪಡಿಸಿತು.













