ನ್ಯೂಸ್ ನಾಟೌಟ್: ಎಎಸ್ಪಿಯಾಗಿ ನಿಯೋಜಿತರಾಗಿದ್ದ ಐಪಿಎಸ್ ಪಾರಿತೋಷ್ ಪಂಕಜ್ ಎಂಬವರಿಗೆ ಸಚಿವರೊಬ್ಬರ ಬೆಂಗಾವಲು ವಾಹನ ಢಿಕ್ಕಿ ಹೊಡೆದ ಘಟನೆ ಮಂಗಳವಾರ(ಮಾ.12) ತೆಲಂಗಾಣದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಚಿವ ಶ್ರೀಧರ್ ಬಾಬುವನ್ನು ಭೇಟಿಯ ವೇಳೆ ಬೆಂಗಾವಲು ವಾಹನ ಕರ್ತವ್ಯ ನಿರತರಾಗಿದ್ದ ಪಾರಿತೋಷ್ ಪಂಕಜ್ ಗೆ ಹಿಂಬದಿಯಿಂದ ಢಿಕ್ಕಿಯಾದೆ. ಪರಿಣಾಮ ನೆಲಕ್ಕೆ ಬಿದ್ದು ಅಧಿಕಾರಿ ಗಾಯಗೊಂಡಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ, ಈ ಬಗ್ಗೆ ಪ್ರಕರಣ ದಾಖಲಾದ ಮಾಹಿತಿಗಳಿಲ್ಲ.