ನ್ಯೂಸ್ ನಾಟೌಟ್ :ಇಂಗ್ಲೀಷ್ ಎಂದರೆ ವಿಶ್ವ ಭಾಷೆ.ಎಲ್ಲಿ ಹೋದರೂ ಆಂಗ್ಲ ಭಾಷೆಯ ಅನಿವಾರ್ಯತೆ ಇರುತ್ತದೆ.ಹೆಚ್ಯಾಕೆ ಯಾವುದಾದರೂ ಕೆಲಸ ಸಿಗಬೇಕೆಂದರೂ ಆಂಗ್ಲ ಭಾಷೆ ತಿಳಿದಿರಬೇಕು ಎಂದು ಹೇಳುತ್ತಾರೆ.ಆದರೆ ಜನ ಸಾಮಾನ್ಯರಿಗೆ ಇದು ಕಷ್ಟವಾಗುತ್ತದೆ.ಆದರೆ ಇಲ್ಲೊಬ್ಬ ಆಟೋ ಚಾಲಕ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡುತ್ತಾ ಎಲ್ಲರ ಗಮನ ಸೆಳೆದಿದ್ದಾನೆ. ಭಾಷೆ ಕಲಿಯುವ ಉದ್ದೇಶದಿಂದ ಆನ್ಲೈನ್ ಕೋರ್ಸ್ ಗಳನ್ನು ಸೇರುವವರ ಮಧ್ಯೆ ಇವರ ಆಂಗ್ಲ ಭಾಷೆ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆಟೋ ಡ್ರೈವರ್ ನಿರರ್ಗಳವಾಗಿ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದಾರೆ. ಎಷ್ಟೇಂದರೆ ಕೇಳುಗರು ಬೆಚ್ಚಿ ಬೀಳುವಷ್ಟು ನಿರರ್ಗಳವಾಗಿ. ವಿದೇಶಿಗನು ಈ ಆಟೋ ಚಾಲಕನ ಇಂಗ್ಲಿಷ್ ಕೇಳಿ ದೊಡ್ಡ ಅಭಿಮಾನಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಆಟೋ ಡ್ರೈವರ್ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಈ ವೀಡಿಯೊವನ್ನು vlogger zakkyzuu ಎನ್ನುವ ವ್ಯಕ್ತಿಯು ಪೋಸ್ಟ್ ಮಾಡಿದ್ದಾರೆ. ಬ್ರಿಟನ್ನ ಈ ವ್ಯಕ್ತಿಯೂ ರಸ್ತೆಬದಿಯಲ್ಲಿ ನಿಂತಿದ್ದ ಆಟೋ ಚಾಲಕನಿಗೆ ಎಟಿಎಂ ಎಲ್ಲಿದೆ ಎಂದು ಕೇಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅದಕ್ಕೆ ಪ್ರತಿಯಾಗಿ ಆಟೋ ಡ್ರೈವರ್ ಅದೇ ನಿರರ್ಗಳವಾಗಿ ಇಂಗ್ಲಿಷ್ನಲ್ಲಿ ಇಲ್ಲಿ ಎರಡು ಎಟಿಎಂಗಳಿವೆ, ಅದರಲ್ಲಿ ಒಂದು ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.
ಆಗ ಆಟೋ ಡ್ರೈವರ್ ನೀವು ಎಟಿಎಂಗೆ ಹೋಗಲು ಬಯಸುತ್ತೀರಾ ಎಂದು ಕೇಳಲು ಪ್ರಾರಂಭಿಸುತ್ತಾರೆ. ಪ್ರಯಾಣ ದರವನ್ನೂ ಹೇಳಿದ್ದು, ಈ ಸಂಭಾಷಣೆಯೆಲ್ಲವೂ ಇಂಗ್ಲಿಷ್ನಲ್ಲಿ ನಡೆದಿದೆ. ಕೊನೆಗೆ ಆಟೋ ಡ್ರೈವರ್ ಕೊನೆಗೆ ವ್ಯಕ್ತಿಯನ್ನು ಆಟೋದಲ್ಲಿ ಕೂರಿಸಿಕೊಂಡು ಇಂಗ್ಲಿಷ್ ನಲ್ಲಿ ಸಾಕಷ್ಟು ಸಂಭಾಷಣೆ ನಡೆಸಿದ್ದಾರೆ. ಈ ಅದ್ಭುತ ವೀಡಿಯೋ ಕೇರಳದ್ದು ಎನ್ನಲಾಗುತ್ತಿದ್ದು, ಈ ಆಟೋ ಚಾಲಕನ ಹೆಸರು ಅಶ್ರಫ್ ಎಂದು ಹೇಳಲಾಗುತ್ತಿದೆ.