ನ್ಯೂಸ್ ನಾಟೌಟ್ : ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡದಿಂದ ಯುವಕನೋರ್ವ ಶನಿವಾರ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ. ಪಶ್ಚಿಮ ಬಂಗಾಲದ ಕಾರ್ಮಿಕ ರಾಕಿಬ್ (22) ಮೃತ ಯುವಕನೆಂದು ತಿಳಿದು ಬಂದಿದೆ.
ಬೆಳಿಗ್ಗೆ ಆಸ್ಪತ್ರೆಯ ಕಿಟಕಿ ಕೆಲಸ ಮಾಡುತ್ತಿದ್ದಾಗ ಹೊರ ಭಾಗದಲ್ಲಿ ಹಾಕಿದ್ದ ಸ್ಟೇಜ್ನಿಂದ ಬಿದ್ದಿದ್ದಾರೆ. 30 ಅಡಿ ಎತ್ತರದಿಂದ ಸಿಮೆಂಟ್ ನೆಲಕ್ಕೆ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.