27.7 C
Sullia
Sunday, March 8, 2026

ಬೆಳ್ತಂಗಡಿ: ಒಂದೇ ದಿನ ಮಾರ್ಗಮಧ್ಯೆ ಕೈ ಕೊಟ್ಟ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು: ಆಗಿದ್ದೇನು?

ನ್ಯೂಸ್ ನಾಟೌಟ್ : ಒಂದೇ ದಿನ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಮಾರ್ಗಮಧ್ಯೆ ಕೈ ಕೊಟ್ಟ ಘಟನೆ ಬೆಳ್ತಂಗಡಿ ತಾಲೂಕು ಕೇಂದ್ರದ ಆರು ಕಡೆಗಳಲ್ಲಿ ಸಂಭವಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget


ಬೆಳಗ್ಗೆ ಮಂಗಳೂರು-ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ
ಗುರುವಾಯನಕೆರೆ ಜಂಕ್ಷನ್ ಸಮೀಪ ಮಂಗಳೂರು ವಿಭಾಗಕ್ಕೆ ಸೇರಿದ
ಬಸ್ಸು ಹಾಳಾಗಿ ನಿಂತಿತು. ಇದರಿಂದ ಕಿಲೋಮೀಟರ್‌ಉದ್ದ ಟ್ರಾಫಿಕ್
ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಪುತ್ತೂರಿಗೆ ಸಂಚರಿಸುತ್ತಿದ್ದ ಬಸ್ ಗೇರುಕಟ್ಟೆ-ಮಲ್ಲೊಟ್ಟು
ಎಂಬಲ್ಲಿ ಕೆಟ್ಟು ನಿಂತಿದೆ. ನೀರಚಿಲುಮೆ ಸಮೀಪ ಪಜಿರಡ್ಕ ಕ್ರಾಸ್ ಬಳಿ ಧರ್ಮಸ್ಥಳದಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ಮತ್ತೂಂದು ಬಸ್‌ ಟಯರ್‌ಕಳಚಿ ಮಾರ್ಗ ಮಧ್ಯೆ ನಿಂತಿತು.

ಸಂಜೆ ವೇಳೆಗೆ ಲಾಯಿಲ ಕಾಶಿಬೆಟ್ಟುವಿನಲ್ಲಿ ಧರ್ಮಸ್ಥಳದಿಂದ ಸ್ಟೇಟ್
ಬ್ಯಾಂಕ್‌ಗೆ ಸಂಚರಿಸುತ್ತಿದ್ದ ಮಂಗಳೂರು ವಿಭಾಗದ ಬಸ್‌ನ
ಟಯರ್‌ಒಡೆದು ದಾರಿ ಮಧ್ಯೆ ನಿಂತಿದೆ..
ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ಬಸ್ಸು
ಗುರುವಾಯನಕೆರೆ ಸಮೀಪದ ವರಕಬೆಯಲ್ಲಿ ಮತ್ತೆ ಕೆಟ್ಟು ನಿಂತಿದ್ದರಿಂದ
ಪ್ರಯಾಣಿಕರಿಗೆ ಸಮಸ್ಯೆಯಾಯಿತು.

Related Articles

LEAVE A REPLY

Please enter your comment!
Please enter your name here

Latest Articles