27.7 C
Sullia
Sunday, March 8, 2026

ಅನನ್ಯಾ ಭಟ್ ಕೇಸ್: ಖ್ಯಾತ ಬಹುಭಾಷಾ ನಟನ ಸಹೋದರನಿಗೆ ಎಸ್ ಐ ಟಿ ನೋಟಿಸ್ ಸಾಧ್ಯತೆ

ನ್ಯೂಸ್ ನಾಟೌಟ್ : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಭಟ್ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಇದೀಗ ಮುಂದುವರಿಸಿದೆ. ಬಹುಭಾಷಾ ನಟ, ನಿರ್ದೇಶಕನ ಸಹೋದರನಿಗೆ ಎಸ್‌ಐಟಿ (SIT) ನೋಟಿಸ್ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಮೊದಲು ಅನನ್ಯಾ ಭಟ್ ಬಗ್ಗೆ ಸುಜಾತಾ ಭಟ್ ಎಲ್ಲರನ್ನು ನಂಬಿಸುವ ಕೆಲಸ ಮಾಡಿದ್ದರು. ಬಳಿಕ ಇದೆಲ್ಲವನ್ನು ಜಮೀನು ವಿಚಾರವಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಇದೀಗ ಅನನ್ಯಾ ಭಟ್ ಕೇಸ್ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ.

ವಾಸಂತಿ ಕೇಸ್ ಬಗ್ಗೆ ತನಿಖೆಗಿಳಿದಾಗ ಎಸ್‌ಐಟಿಗೆ ಬಹುಭಾಷಾ ನಟನ ಸಹೋದರನ ಹೆಸರು ಕೇಳಿಬಂದಿದೆ. ನಟನ ಸಹೋದರ ಕೂಡ ಕಾಲಿವುಡ್ ನಟನಾಗಿದ್ದು, ವಾಸಂತಿ ಗಂಡನ ಗೆಳೆಯ ಎಂದು ತಿಳಿದುಬಂದಿದೆ. ಸದ್ಯ ಕಾಲಿವುಡ್ ನಟ ಚೆನ್ನೈನಲ್ಲಿರುವುದಾಗಿ ಮಾಹಿತಿಯಿದ್ದು, ಆತನ ವಿಳಾಸ ಪತ್ತೆ ಮಾಡುವಲ್ಲಿ ಎಸ್‌ಐಟಿ ಕಾರ್ಯನಿರತವಾಗಿದೆ. ವಿಳಾಸ ಸಿಗದ ಹಿನ್ನೆಲೆ ನೋಟಿಸ್ ನೀಡಲು ವಿಳಂಬವಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles