ನ್ಯೂಸ್ ನಾಟೌಟ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವತಿಯಿಂದ ದೇಶವ್ಯಾಪಿ ಸ್ವಸ್ಥ ನಾರಿ, ಸಶಕ್ತ ಪರಿವಾರ ಅರೋಗ್ಯ ಅಭಿಯಾನದ ಅಂಗವಾಗಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎನ್. ಎಸ್. ಎಸ್ ಘಟಕದ ವತಿಯಿಂದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಯಿತು.

ಈ ವೇಳೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ.ವಿ ಚಿದಾನಂದ, “ರಕ್ತದಾನವು ಅತ್ಯಂತ ಮಹಾ ದಾನ. ರಕ್ತದಾನದ ಅಗತ್ಯತೆ, ಆರೋಗ್ಯದ ದೃಷ್ಟಿಯಿಂದ ಅದರ ಪ್ರಯೋಜನ, ಹಾಗೂ ನಿಯಮಿತ ರಕ್ತದಾನದಿಂದ ಜೀವ ಉಳಿಸುವ ಮಹತ್ವವನ್ನು ವಿವರಿಸಿದರು. ಶಿಬಿರದಲ್ಲಿ ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿ, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ ರಾಮಚಂದ್ರ ಭಟ್, ಪೆತಾಲಜಿ ವಿಭಾಗ ಮುಖ್ಯಸ್ಥರು ಪ್ರೊ. ಡಾ ಸತ್ಯವತಿ ಆರ್ ಆಳ್ವ, ಬ್ಲಡ್ ಬ್ಯಾಂಕ್ ಆಫೀಸರ್ ಪ್ರೊ. ಡಾ. ನವ್ಯ ಹಾಗೂ ಡಾ. ಅಂಜಲಿ, ಕಮ್ಯೂನಿಟಿ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅಪೂರ್ವ ದೊರೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.













