ನ್ಯೂಸ್ ನಾಟೌಟ್ : ಹೆತ್ತ ತಾಯಿಯೇ ಇಬ್ಬರು ಮಕ್ಕಳನ್ನು ಕೊಂದ ಘಟನೆ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಯಾದಲಘಟ್ಟ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೆತ್ತ ತಾಯಿಯೇ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನು ನೇಣಿಗೆ ಶರಣಾಗಿರುವ ಬಗ್ಗೆ ವರದಿ ತಿಳಿಸಿದೆ.
ಬೆಳಗ್ಗೆ ಎಂದಿನಂತೆ ತಿಪ್ಪೇಸ್ವಾಮಿ ಜಮೀನಿಗೆ ತೆರಳಿದ್ದರು. ಹೀಗಾಗಿ ಎಂದಿನಂತೆ ಪತ್ನಿ ಊಟ ತೆಗೆದುಕೊಂಡು ಬರುವಳೆಂಬ ನಿರೀಕ್ಷೆಯಲ್ಲಿದ್ದ ಪತಿಗೆ ಮನೆಯಲ್ಲಿ ನಡೆದಿರುವ ಘಟನೆ ಕೇಳಿ ಆಶ್ಚರ್ಯ ಆಗಿದೆ. ಗ್ರಾಮಸ್ಥರಿಂದ ವಿಷಯ ತಿಳಿದು ಮನೆಗೆ ಧಾವಿಸಿ, ಗಮನಿಸಿದಾಗ ಪತ್ನಿ ಲತಾ ಹಾಗೂ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.
ಯಾದಲಗಟ್ಟ ಗ್ರಾಮದ ಲತಾ ಹಾಗೂ ಪತಿ ತಿಪ್ಪೇಸ್ವಾಮಿಗೆ ಎಂದು ಅವರನ್ನು ಗುರುತಿಸಲಾಗಿದೆ.
ತಾಯಿ ಲತಾ (25) ಮಗಳು ಪ್ರಣೀತ(5), ಪುತ್ರ ಜ್ಞಾನೇಶ್ವರ ಮೃತರೆಂದು ಗುರುತಿಸಲಾಗಿದೆ. ಲತಾ ಮೊದಲಿಗೆ ತನ್ನ ಇಬ್ಬರು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆಗೈದಿದ್ದು ಬಳಿಕ ತಾನು ಸಹ ನೇಣಿಗೆ ಶರಣಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.