27.7 C
Sullia
Sunday, March 8, 2026

ಧರ್ಮಸ್ಥಳ ಬುರುಡೆ ಕೇಸ್ : ಆ್ಯಂಬುಲೆನ್ಸ್ ವಾಹನ ಚಾಲಕರ ವಿಚಾರಣೆ

ನ್ಯೂಸ್ ನಾಟೌಟ್ : ಧರ್ಮಸ್ಥಳ ಬುರುಡೆ ಕೇಸ್ ಗೆ
ಸಂಬಂಧಿಸಿ ಎಸ್ ಐಟಿ ಮೃತದೇಹಗಳನ್ನು ಸಾಗಾಟ
ಮಾಡಿರುವ ವಿಚಾರವಾಗಿ ಬೆಳ್ತಂಗಡಿಯ ಇಬ್ಬರು ಆ್ಯಂಬುಲೆನ್ಸ್
ವಾಹನ ಚಾಲಕರನ್ನು ವಿಚಾರಣೆ ನಡೆಸಿದೆ.ಸೋಮವಾರ ಮತ್ತೆ
ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

.
ಕಳೆದ ಸುಮಾರು 20 ವರ್ಷಗಳಿಂದ ಆ್ಯಂಬುಲೆನ್ಸ್ ಚಾಲಕರಾಗಿ
ಕರ್ತವ್ಯ ನಿರ್ವಹಿಸುತ್ತಿರುವ ಜಲೀಲ್ ಹಾಗೂ ಹಮೀದ್ ಅವರಿಗೆ
ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಹೀಗಾಗಿ
ಶನಿವಾರ ಬೆಳಗ್ಗೆ ಇಬ್ಬರು ಕೂಡ ವಿಚಾರಣೆಗೆ ಹಾಜರಾಗಿದ್ದಾರೆ.ಮುಂದೆ ಅಗತ್ಯ ಬಿದ್ದರೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ,ಅದರಂತೆ ನಾವು ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದೇವೆ ಎಂದು ಚಾಲಕರು ಮಾಹಿತಿ ನೀಡಿದ್ದಾರೆ.


ಬೆಳ್ತಂಗಡಿ ಭಾಗದಲ್ಲಿ ಮೃತದೇಹಗಳ ಸಾಗಾಟ, ರೋಗಿಗಳನ್ನು
ಆಸ್ಪತ್ರೆಗೆ ಸಾಗಿಸುವಲ್ಲಿ ಈ ಎರಡು ಆ್ಯಂಬುಲೆನ್ಸ್ ಚಾಲಕರ ಹೆಸರು
ಮುಂಚೂಣಿಯಲ್ಲಿದ್ದು, ಸಾಕಷ್ಟು ವರ್ಷಗಳ ಕಾಲ ಬೆಳ್ತಂಗಡಿಯಲ್ಲಿ
ಇವರಿಬ್ಬರಲ್ಲಿ ಮಾತ್ರ ಆ್ಯಂಬುಲೆನ್ಸ್ ಇತ್ತು. ಹೀಗಾಗಿ ಹೆಚ್ಚಿನವರು
ಅಂತಹ ತುರ್ತು ಸಂದರ್ಭದಲ್ಲಿ ಇವರನ್ನೇ ಸಂಪರ್ಕಿಸುತ್ತಿದ್ದು.
ಪ್ರಾರಂಭದ ವರ್ಷಗಳಲ್ಲಿ ಧರ್ಮಸ್ಥಳ ಭಾಗದಲ್ಲೂ ಇವರೇ
ಕಾರ್ಯನಿರ್ವಹಿಸುತ್ತಿದ್ದರು.

Related Articles

LEAVE A REPLY

Please enter your comment!
Please enter your name here

Latest Articles