ನ್ಯೂಸ್ ನಾಟೌಟ್: ಹೂವಿನ ಬಾಣದಂತೆ’ ಹಾಡನ್ನು ತನ್ನದೇ ಸ್ಟೈಲ್ನಲ್ಲಿ ಹಾಡಿ, ಆ ಮೂಲಕ ಎಲ್ಲೆಲ್ಲೂ ಹವಾ ಎಬ್ಬಿಸಿ ಟ್ರೆಂಡ್ ಹುಟ್ಟು ಹಾಕಿದ್ದ ನಿತ್ಯಶ್ರೀ ವೈರಲ್ ಹುಡುಗಿ ಅಪಘಾತದಲ್ಲಿ ದಿಢೀರ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ ನಿತ್ಯಶ್ರೀ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಇದೀಗ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿದ್ದು, ತಲೆಗೆ ಭಾರಿ ಪೆಟ್ಟು ಬಿದ್ದಿರುವ ಕಾರಣ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಆದರೆ ನಿತ್ಯಶ್ರೀ ಅವರ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿರುವ ಸುಳ್ಳು ಸುಳ್ಳು ಸುದ್ದಿಗಳನ್ನ ನಂಬದಂತೆ ನಿತ್ಯಶ್ರೀ ಅವರ ಅಭಿಮಾನಿಗಳು ಮನವಿ ಮಾಡ್ತಿದ್ದಾರೆ. ಹಾಗೇ ನಿತ್ಯಶ್ರೀ ಅವರು ಆದಷ್ಟು ಬೇಗ ಹುಷಾರಾಗಿ ಬಂದು ಮತ್ತೆ ಹಾಡು ಹಾಡಲಿ ಅಂತಾ ಅಭಿಮಾನಿಗಳು ಈಗ ವಿಶೇಷ ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ!













