27.7 C
Sullia
Sunday, March 8, 2026

ಕೇರಳ,ತಮಿಳುನಾಡು,ಬಾಲಿವುಡ್​ ಸಿನಿ ಪ್ರೇಮಿಗಳೂ ಕಾಂತಾರಕ್ಕೆ ಫಿದಾ..!ಕನ್ನಡದ ತಾಕತ್ತು ಜಗತ್ತಿಗೆ ಸಾರಿದ ರಿಷಬ್‌ ಸಿನಿಮಾ!

ನ್ಯೂಸ್ ನಾಟೌಟ್ : 2022 ರಲ್ಲಿಯೇ ಕಾಂತರ ಸಿನಿಮಾಗೆ ತೆಲುಗು ಪ್ರೇಕ್ಷಕರು ಫಿಗಾ ಆಗಿ ಹೋಗಿದ್ರು. ಕನ್ನಡ ಸಿನಿಮಾಗೆ ದೊಡ್ಡ ಮಟ್ಟದ ಗೆಲುವು ನೀಡಿದ್ರು. ಇದೀಗ ಅದಕ್ಕೂ ದೊಡ್ಡ ಗೆಲುವು ನೀಡ್ತಿದ್ದಾರೆ ತೆಲುಗು ಪ್ರೇಕ್ಷಕರು. 


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬೇರೆ ಸ್ಟೇಟ್‌ನ ಸಿನಿ ಪ್ರೇಮಿಗಳಿಗೆ ಹೋಲಿಸಿದ್ರೆ, ತಮಿಳುನಾಡು ಮತ್ತು ಕೇರಳದ ಸಿನಿ ಪ್ರೇಮಿಗಳು ವಿಭಿನ್ನ. ಅವ್ರು ಅಷ್ಟು ಸುಲಭದಲ್ಲಿ ಬೇರೆ ಸ್ಟೇಟ್‌ನ, ಬೇರೆ ನಾಡಿನ ಮಣ್ಣಿನ ಕಥೆಯನ್ನ ಒಪ್ಪಿಕೊಳ್ಳುವುದಿಲ್ಲ, ಅಪ್ಪಿಕೊಳ್ಳುವುದಿಲ್ಲ. ಕಾಂತಾರ ಚಾಪ್ಟರ್‌ 1 ಸಿನಿಮಾವನ್ನು ಎರಡೂ ರಾಜ್ಯದವರು ಒಪ್ಪಿಕೊಂಡಿದ್ದಾರೆ. ಕಾಂತಾರ ಸಿನಿಮಾ ದೈವದ ಕಥೆಯ ಸುತ್ತ ಸಾಗುವ ಸಿನಿಮಾ ಆಗಿರೋದ್ರಿಂದ ಕೇರಳಕ್ಕೆ ಸ್ವಲ್ಪ ಟಚ್ ಇದೆ. ಹೀಗಾಗಿ ಕೇರಳಿಗರು ಒಪ್ಪಿಕೊಂಡಿರುವುದರಲ್ಲಿ ದೊಡ್ಡ ಅಚ್ಚರಿ ಅನಿಸೋದಿಲ್ಲ. ತಮಿಳುನಾಡಿಗರು ಒಪ್ಪಿಕೊಂಡಿದ್ದು ಖುಷಿ ಪಡೋ ವಿಚಾರ. ವಿಶೇಷ ಅಂದ್ರೆ 2022 ರಲ್ಲಿ ಕಾಂತಾರ ಸಿನಿಮಾಗೂ ಜೈ ಅಂತ ಹೇಳಿದ್ದ ತಮಿಳುನಾಡಿಗರು ಇದೀಗ ಕಾಂತಾರ ಚಾಪ್ಟರ್‌ 1 ಸಿನಿಮಾಗೂ ಜೈ ಎಂದಿದ್ದಾರೆ. 

ಕೆಜಿಎಫ್‌ ಸಿನಿಮಾ ಬರೋದಕ್ಕೂ ಮುನ್ನ ಸ್ಯಾಂಡಲ್‌ವುಡ್‌ ಸಿನಿಮಾಗಳ ಬಗ್ಗೆ ಉತ್ತರ ಭಾರತೀಯರಿಗೆ ಅಷ್ಟೇನು ಗೊತ್ತಿಲ್ಲವಾಗಿತ್ತು. ಅಲ್ಲಿಯ ಥಿಯೇಟರ್‌ನಲ್ಲಿ ಕನ್ನಡ ಸಿನಿಮಾಗೆ ಆದ್ಯತೆಯೂ ಇರ್ತಾ ಇಲ್ಲ. ಕೆಜಿಎಫ್‌ನಂತರ ಕನ್ನಡ ಸಿನಿಮಾಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನವಯುಗ ಶುರುವಾಗಿದೆ. ಇದೀಗ ಕಾಂತಾರ ಚಾಪ್ಟರ್‌ 1 ಸಿನಿಮಾ ನವಯುಗವನ್ನ ಇನ್ನಷ್ಟು ಬೆಳೆಗಿಸ್ತಿದೆ. 

Related Articles

LEAVE A REPLY

Please enter your comment!
Please enter your name here

Latest Articles