ನ್ಯೂಸ್ ನಾಟೌಟ್ : ಸಂಪಾಜೆಯಲ್ಲಿ ಕೊಡಗು ಡಿ. ಸಿ. ಸಿ ಬ್ಯಾಂಕು ನಿ. ಮಡಿಕೇರಿ 22 ನೇ ನೂತನ ಶಾಖೆಯ ಉದ್ಘಾಟನೆಯನ್ನು ವೀರಾಜಪೇಟೆ ವಿಧಾನ ಸಭಾ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್ . ಪೊನ್ನಣ್ಣ ನೆರವೇರಿಸಿದರು.
ಬಳಿಕ ಬ್ಯಾಂಕ್ ಭದ್ರತಾ ಕೊಠಡಿ ,ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಹೆಸರಿನ ಫಲಕವನ್ನು ಉದ್ಘಾಟಿಸಿದರು.ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ನಗದು ಕೌಂಟರ್ ಉದ್ಘಾಟಿಸಿದರು.ಡಿ. ಸಿ .ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ.ಪಿ.ಬಾಂಡ್ ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ಸಹಕಾರ ಸಂಘ ಜನರಿಗೆ ಸಹಾಯವಾಗುವಂತಹ ಯೋಜನೆಯಾಗಿದೆ. ಶಾಖೆ ತೆರೆದಿಟ್ಟು ಪ್ರಯೋಜನವಿಲ್ಲ, ಗ್ರಾಹಕರಿಗೆ ಹೊಸ ಹೊಸ ಯೋಜನೆಗಳ ಮೂಲಕ ಅವ್ರಿಗೆ ಅನುಕೂಲವಾಗುವಂತಿರಬೇಕು. ಈ ನೂತನ ಸಂಸ್ಥೆ ಆ ವ್ಯವಸ್ಥೆಯನ್ನು ಕಾಪಾಡಿದರೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗುತ್ತದೆ.ಈ ನೂತನ ಶಾಖೆ ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.
ಬ್ಯಾಂಕ್ ಅಧ್ಯಕ್ಷ ಕೊಡಂದೇರ.ಪಿ.ಬಾಂಡ್ ಗಣಪತಿ ಬ್ಯಾಂಕ್ ಹಿನ್ನಲೆ ಹಾಗೂ ಶಾಖೆಯ ಸಾಧನೆ, ಮುಂದಿನ ಯೋಜನೆ, ಸಂಪಾಜೆ ಕೊಡಗಿನ ಬ್ಯಾಂಕ್ ನಲ್ಲಿ ಎಟಿಎಂ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಕೇಟೋಳಿರಹರೀಶ್ ಪೂವಯ್ಯ ,ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷರು ನಾಗೇಶ್ ಕುಂದಲ್ಪಾಡಿ , ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೊಸೈಟಿ ಅಧ್ಯಕ್ಷ ಅನಂತ್ ಎನ್. ಸಿ. ಊರುಬೈಲು ಶುಭ ಹಾರೈಸಿದರು. ಸಿಇಓ ಬಿ.ಕೆ.ಆನಂದ ಶಾಖಾ ಮ್ಯಾನೇಜರ್ ಶ್ರೀನಿವಾಸ್ ಮತ್ತು ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಮಾಕಾಂತ್, ಪ್ರಧಾನ ವ್ಯವಸ್ಥಾಪಕರು ಎ. ಎಸ್ ಪಾರ್ವತಿ ,ನಿರ್ದೇಶಕರು,ಸಿಬ್ಬಂದಿ ವರ್ಗ, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನ ಅಧ್ಯಕ್ಷರು,ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು.