ನ್ಯೂಸ್ ನಾಟೌಟ್ : ಆಸ್ಪತ್ರೆ ಸಿಬ್ಬಂದಿ ಮದ್ಯ ಸೇವನೆ ಮಾಡಿ ಮಹಿಳೆಗೆ ಡಯಾಲಿಸಿಸ್ ಮಾಡಿದ್ದು, ಸಿಬ್ಬಂದಿ ಯಡವಟ್ಟಿನಿಂದ ಚಿಕಿತ್ಸೆಗೆ ಬಂದ ಮಹಿಳೆಯ ಪ್ರಾಣಪಕ್ಷಿ ಹಾರಿ ಹೋದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕುಡಿದು ನಶೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದ ಸಿಬ್ಬಂದಿಯಿಂದ ಅನಾಹುತ ಮಾಡಿದ್ದಾರೆ. ನಶೆಯಲ್ಲಿ ಡಯಾಲಿಸಿಸ್ ಮಾಡಿದ ಕಾರಣ ಮಹಿಳೆಯ ಕೊನೆಯುಸಿರೆಳೆದಿರುವುದಾಗಿ ಆರೋಪಿಸಲಾಗಿದೆ .
ವಿಜಯಪುರ ಜಿ. ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಡಯಾಲಿಸಿಸ್ ವೇಳೆ ಆಸ್ಪತ್ರೆ ಬೆಡ್ ಮೇಲೆಯೇ ಕೊನೆಯುಸಿರೆಳೆದ ಮಹಿಳಾ ರೋಗಿಯ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟಿಸುತ್ತಿದ್ದಾರೆ.
ಬಿಸ್ಮಿಲ್ಲಾ ನದಾಫ್ (35) ಕೊನೆಯುಸಿರೆಳೆದ ಮಹಿಳೆ ಎಂದು ಗುರುತಿಸಲಾಗಿದ್ದು, ಇಂಡಿ ತಾ. ಮಾವಿನಹಳ್ಳಿ ಗ್ರಾಮದವಳಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್ ಗೆ ಬಿಸ್ಮಿಲ್ಲಾಳನ್ನ ಕರೆತಂದಿದ್ದ ಪೋಷಕರು ಈಗ ಮಗಳನ್ನು ಕಳೆದುಕೊಂಡಿದ್ದಾರೆ.
ಆದರೆ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಸವರಾಜ್ ಹಂಜಗಿ ಎನ್ನುವವರು ಕುಡಿದ ನಶೆಯಲ್ಲೆ ಡಯಾಲಿಸಿಸ್ ಮಾಡಿದ್ದಾರೆ. ಅವರು ಸರಿಯಾಗಿ ಡಯಾಲಿಸಿಸ್ ಕ್ರಮವನ್ನು ಪಾಲಿಸದ ಹಿನ್ನೆಲೆಯಲ್ಲಿ ರೋಗಿ ಬಿಸ್ಮಿಲ್ಲ ಅಸುನೀಗಿರುವುದಾಗಿ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ.