ನ್ಯೂಸ್ ನಾಟೌಟ್ : ನಟಿ ರಶ್ಮಿಕಾ ಮಂದಣ್ಣ, ಮತ್ತು ನಟ ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದು ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಭಾರಿ ಚರ್ಚೆಗೆ ಕಾರಣವಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ರಹಸ್ಯವಾಗಿ ಹೈದರಾಬಾದ್‌ನ ದೇವರಕೊಂಡ ಮನೆಯಲ್ಲಿ ನಿಶ್ಚಿತಾರ್ಥ (Engaemet) ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಿಶ್ಚಿತಾರ್ಥವು ಇಬ್ಬರೂ ತಾರೆಯರ ಆಪ್ತ ಸ್ನೇಹಿತರು ಮತ್ತು ಎರಡು ಕುಟುಂಬಗಳ ಸಮ್ಮುಖದಲ್ಲಿ ಬಹಳ ಖಾಸಗಿಯಾಗಿ ನಡೆದಿದೆ. ವಿಜಯ್ ಮತ್ತು ರಶ್ಮಿಕಾ ಶೀಘ್ರವೇ ಈ ಸುದ್ದಿಯನ್ನು ಅಧಿಕೃತಗೊಳಿಸಲಿದ್ದಾರೆ ಎಂದು ವರದಿಯಾಗಿದೆ.ಕಳೆದ ಹಲವು ಸಮಯಗಳಿಂದ ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.ಆದರೆ ಈಗ ನಿಶ್ಚಿತಾರ್ಥದ ಸುದ್ದಿ ಹರಿದಾಡುತ್ತಿದೆ.













