ನ್ಯೂಸ್ ನಾಟೌಟ್ :ಬಾರ್ ಬಳಿ ಯುವಕನಿಗೆ ಚೂರಿ ಇರಿದ ಘಟನೆ ದ.ಕ ಜಿಲ್ಲೆಯ ಸುಳ್ಯದ ಶ್ರೀರಾಮ್ ಪೇಟೆಯಲ್ಲಿ
ಶನಿವಾರ ಸಂಭವಿಸಿದೆ.
ಸುಳ್ಯ ಬೀರಮಂಗಲದ ಹರೀಶ್ ಚೂರಿ ಇರಿತದಿಂದ ಗಾಯಗೊಂಡ ಯುವಕ ಎಂದು ತಿಳಿದು ಬಂದಿದೆ. ಹರೀಶ್ ಹಾಗೂ ಇತರರು ಬಾರ್ ಬಳಿ ಇದ್ದ ವೇಳೆ ಚೂರಿ ಇರಿಯಲಾಗಿದೆ ಎನ್ನಲಾಗಿದೆ.
ಹರೀಶ್ ಜತೆಗಿದ್ದ ಇನ್ನೋರ್ವ ವ್ಯಕ್ತಿಗೂ ಗಾಯವಾಗಿದೆ. ಘಟನೆಯಲ್ಲಿ ಇಬ್ಬರೂ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.














