ನ್ಯೂಸ್ ನಾಟೌಟ್ : ಸೌತ್ ಇಂಡಿಯಾದ ಸ್ಟಾರ್ ನಟಿ, ಮಂಗಳೂರು ಮೂಲದ ಅನುಷ್ಕಾ ಶೆಟ್ಟಿಯ ಮದುವೆ ವಿಚಾರ ಆಗಿಂದಾಗೆ ಮುನ್ನಲೆಗೆ ಬಂದು, ಮತ್ತೆ ಮರೆಯಾಗ್ತಿತ್ತು. ಆದ್ರೀಗ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಜೋರಾಗಿ ಕೇಳಿ ಬರ್ತಿದೆ.
ಅಂದ ಹಾಗೆ ಇದೇ ವರ್ಷ ಅನುಷ್ಕಾ ಶೆಟ್ಟಿ ಸಪ್ತಪದಿ ತುಳಿಯಲಿದ್ದಾರಂತೆ. ಮೂಲಗಳ ಪ್ರಕಾರ ಅನುಷ್ಕಾ ಕೈ ಹಿಡಿಯಲಿರೋ ಹುಡುಗ ಉದ್ಯಮಿಯಾಗಿದ್ದು, ಅನುಷ್ಕಾ ಶೆಟ್ಟಿ ಕುಟುಂಬಕ್ಕೆ ತುಂಬಾ ಆಪ್ತರು ಎನ್ನಲಾಗ್ತಿದೆ. ಈ ವಿಚಾರ ಅನುಷ್ಕಾ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಆದರೆ ಪ್ರಭಾಸ್ ಅಭಿಮಾನಿಗಳಿಗೆ ಬೇಸರವಾಗಿದೆ.
‘ದೇವಸೇನಾ’ ಖ್ಯಾತಿಯ ಅನುಷ್ಕಾ ಶೆಟ್ಟಿಯವರ ಮದುವೆ ವಿಚಾರ ಪ್ರಭಾಸ್ ಜತೆ ಎಂದು ಸುದ್ದಿಯಾಗುತ್ತಲೇ ಇತ್ತು.ಅದಾದ ಬಳಿಕ ಈ ಜೋಡಿ ಅದಕ್ಕೆ ಯಾವ ಪ್ರತಿಕ್ರಿಯೆಯನ್ನು ಕೊಟ್ಟಿರಲಿಲ್ಲ.ಇದೀಗ ಮತ್ತೆ ಸದ್ದು ಮಾಡುತ್ತಿದೆ. ಕಳೆದ ಹಲವು ವರ್ಷಗಳಿಂದ ಅಭಿಮಾನಿಗಳಲ್ಲಿ ಕುತೂಹಲಕ್ಕೀಡು ಮಾಡಿದ್ದ ವಿಷಯಕ್ಕೆ ಈಗ ಉತ್ತರ ಸಿಗುವ ಎಲ್ಲಾ ಲಕ್ಷಣಗಳು ಇವೆ.
ಕೆಲವು ಮೂಲಗಳ ಪ್ರಕಾರ, ಅನುಷ್ಕಾ ಶೆಟ್ಟಿ ಅವರು ಇದೇ ವರ್ಷ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅವರು ಕೈಹಿಡಿಯಲಿರುವ ಹುಡುಗ ಚಿತ್ರರಂಗ ಹಿನ್ನಲೆಯುಳ್ಳವರಲ್ಲ, ಬದಲಾಗಿ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ವಿಶೇಷವೆಂದರೆ, ಈತ ಅನುಷ್ಕಾ ಅವರ ಆಪ್ತರು ಎನ್ನಲಾಗಿದ್ದು ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಈ ಮದುವೆ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.













