ಬ್ರೇಕಪ್‌ ಬಗ್ಗೆ ಆಡಿಯೋ ವೈರಲ್, ಕೊನೆಗೂ ಸ್ಪಷ್ಟನೆ ನೀಡಿದ ರಶ್ಮಿಕಾ! ಕನ್ನಡದಲ್ಲೇ ವಾರ್ನಿಂಗ್ ಕೊಟ್ಟು ಹೇಳಿದ್ದೇನು

ನ್ಯೂಸ್ ನಾಟೌಟ್ :

Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯಾಶನಲ್​​ ಕ್ರಶ್​​ ರಶ್ಮಿಕಾ ಮಂದಣ್ಣ ತಾಯಿ ಸುಮನ್‌ ಅವರದ್ದು ಎನ್ನಲಾದ ಹಳೇ ಆಡಿಯೋ ಕ್ಲಿಪ್‌ ಭಾರೀ ವೈರಲ್​ ಆಗಿದ್ದು, ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಈ ಬೆನ್ನಲ್ಲೇ ಎಚ್ಚೆತ್ತ ರಶ್ಮಿಕಾ ಕೊನೆಗೂ ಮೌನ ಮುರಿದಿದ್ದು, ಕಳೆದ 8 ವರ್ಷಗಳಿಂದ ತಾವು ಅನುಭವಿಸುತ್ತಿರೋ ಕಿರುಕುಳದ ಬಗ್ಗೆ ಪೋಸ್ಟ್​​ ಹಾಕಿದ್ದಾರೆ.

ಪೋಸ್ಟ್​​ನಲ್ಲೇನಿದೆ?

ನನ್ನ ಈ 8 ವರ್ಷಗಳ ಸಿನಿ ಪಯಣದಲ್ಲಿ ಒಂದು ವರ್ಗಕ್ಕೆ ಸೇರಿದ ಮಾಧ್ಯಮಗಳು ಹಾಗೂ ಕೆಲವು ವ್ಯಕ್ತಿಗಳು ಸತತವಾಗಿ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಮಾಹಿತಿ ಹರಡುವುದು, ನಾನು ಆಡದ ಮಾತುಗಳನ್ನು ತಿರುಚಿ ಹೇಳುವುದು ಸಾಮಾನ್ಯವಾಗಿದೆ.

ಕೇವಲ ವ್ಯೂಸ್ ಮತ್ತು ಎಂಗೇಜ್‌ಮೆಂಟ್‌ಗಾಗಿ ದ್ವೇಷ ಹರಡುತ್ತಿರುವುದು ನನಗೆ ತೀವ್ರ ನೋವುಂಟು ಮಾಡಿದೆ ಎಂದು ರಶ್ಮಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲಾದ ಆಡಿಯೋ:

ಸುಮಾರು ವರ್ಷಗಳ ಹಿಂದಿನ ಖಾಸಗಿ ಸಂಭಾಷಣೆಯನ್ನು ಯಾರೋ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ಈಗ ಬಿಡುಗಡೆ ಮಾಡಿದ್ದಾರೆ ಎಂದು ರಶ್ಮಿಕಾ ಆರೋಪಿಸಿದ್ದಾರೆ. “ಅದು ಎಂಟು ವರ್ಷಗಳ ಹಿಂದಿನ ಮಾತು. ಅದರ ಒಂದು ಸಣ್ಣ ಭಾಗವನ್ನು ತೆಗೆದುಕೊಂಡು, ಸಂದರ್ಭಕ್ಕೆ ತಕ್ಕಂತೆ ಬಳಸದೆ ವಿವಾದ ಸೃಷ್ಟಿಸಲಾಗಿದೆ. ನನ್ನ ವೈಯಕ್ತಿಕ ಜೀವನದ ಇತ್ತೀಚಿನ ಬೆಳವಣಿಗೆಗಳ ಸಮಯದಲ್ಲೇ ಇದನ್ನು ಹರಿಬಿಟ್ಟಿರುವುದು ದುರದೃಷ್ಟಕರ” ಎಂದವರು ಸ್ಪಷ್ಟನೆ ನೀಡಿದ್ದಾರೆ.

ತನ್ನ ವೈಯಕ್ತಿಕ ವಿಚಾರಕ್ಕೆ ಕುಟುಂಬವನ್ನು ಎಳೆದು ತಂದಿರುವುದಕ್ಕೆ ರಶ್ಮಿಕಾ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, “ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲರು? ಈ ವಿಷಯಕ್ಕೆ ಸಂಬಂಧವೇ ಇಲ್ಲದ ನನ್ನ ಕುಟುಂಬದವರನ್ನು ಮುಜುಗರಕ್ಕೆ ದೂಡಲಾಗಿದೆ. ಇದು ಗಂಭೀರ ಉಲ್ಲಂಘನೆ ಮತ್ತು ಮಾನಹಾನಿಕರ ಕೃತ್ಯ,” ಎಂದು ಕಿಡಿಕಾರಿದ್ದಾರೆ.

ರಶ್ಮಿಕಾ ನೇರ ಎಚ್ಚರಿಕೆ:

ಕಳೆದ ಎಂಟು ವರ್ಷಗಳಿಂದ ನನ್ನ ಮೇಲೆ ದಾಳಿಯಾದಾಗ ನಾನು ಸುಮ್ಮನಿದ್ದೆ. ಆದರೆ ಈಗ ಬೇರೆಯವರನ್ನು ಈ ವಿವಾದಕ್ಕೆ ಎಳೆದು ತಂದಾಗ ನಾನು ಸುಮ್ಮನಿರಲು ಸಾಧ್ಯವಿಲ್ಲ. ನನ್ನ ಜೀವನ ಹೇಗಿರಬೇಕು ಎಂದು ನಿರ್ಧರಿಸಲು ಈ ಜನರಿಗೆ ಯಾವುದೇ ಹಕ್ಕಿಲ್ಲ. ನಮ್ಮ ಜೀವನ ನಮಗೆ ಸೇರಿದ್ದು, ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುತ್ತೇವೆ,” ಎಂದು ಖಡಕ್ ಆಗಿ ಹೇಳಿದ್ದಾರೆ.

ತನ್ನ ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ರಶ್ಮಿಕಾ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸದ್ಯ ರಶ್ಮಿಕಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.ವಾರ್ನಿಂಗ್ ಕೊಟ್ಟು ಹೇಳಿದ್ದೇನು?

ನ್ಯಾಷನಲ್​​ ಕ್ರಶ್​​ ರಶ್ಮಿಕಾ ಮಂದಣ್ಣ ತಾಯಿ ಸುಮನ್‌ ಅವರದ್ದು ಎನ್ನಲಾದ ಹಳೇ ಆಡಿಯೋ ಕ್ಲಿಪ್‌ ಭಾರೀ ವೈರಲ್​ ಆಗಿದ್ದು, ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಈ ಬೆನ್ನಲ್ಲೇ ಎಚ್ಚೆತ್ತ ರಶ್ಮಿಕಾ ಕೊನೆಗೂ ಮೌನ ಮುರಿದಿದ್ದು, ಕಳೆದ 8 ವರ್ಷಗಳಿಂದ ತಾವು ಅನುಭವಿಸುತ್ತಿರೋ ಕಿರುಕುಳದ ಬಗ್ಗೆ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಹಾಕಿದ್ದಾರೆ.

ಇನ್​ಸ್ಟಾ ಪೋಸ್ಟ್​​ನಲ್ಲೇನಿದೆ?

ನನ್ನ ಈ 8 ವರ್ಷಗಳ ಸಿನಿ ಪಯಣದಲ್ಲಿ ಒಂದು ವರ್ಗಕ್ಕೆ ಸೇರಿದ ಮಾಧ್ಯಮಗಳು ಹಾಗೂ ಕೆಲವು ವ್ಯಕ್ತಿಗಳು ಸತತವಾಗಿ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಮಾಹಿತಿ ಹರಡುವುದು, ನಾನು ಆಡದ ಮಾತುಗಳನ್ನು ತಿರುಚಿ ಹೇಳುವುದು ಸಾಮಾನ್ಯವಾಗಿದೆ.

ಕೇವಲ ವ್ಯೂಸ್ ಮತ್ತು ಎಂಗೇಜ್‌ಮೆಂಟ್‌ಗಾಗಿ ದ್ವೇಷ ಹರಡುತ್ತಿರುವುದು ನನಗೆ ತೀವ್ರ ನೋವುಂಟು ಮಾಡಿದೆ ಎಂದು ರಶ್ಮಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲಾದ ಆಡಿಯೋ:

ಸುಮಾರು ವರ್ಷಗಳ ಹಿಂದಿನ ಖಾಸಗಿ ಸಂಭಾಷಣೆಯನ್ನು ಯಾರೋ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ಈಗ ಬಿಡುಗಡೆ ಮಾಡಿದ್ದಾರೆ ಎಂದು ರಶ್ಮಿಕಾ ಆರೋಪಿಸಿದ್ದಾರೆ. “ಅದು ಎಂಟು ವರ್ಷಗಳ ಹಿಂದಿನ ಮಾತು. ಅದರ ಒಂದು ಸಣ್ಣ ಭಾಗವನ್ನು ತೆಗೆದುಕೊಂಡು, ಸಂದರ್ಭಕ್ಕೆ ತಕ್ಕಂತೆ ಬಳಸದೆ ವಿವಾದ ಸೃಷ್ಟಿಸಲಾಗಿದೆ. ನನ್ನ ವೈಯಕ್ತಿಕ ಜೀವನದ ಇತ್ತೀಚಿನ ಬೆಳವಣಿಗೆಗಳ ಸಮಯದಲ್ಲೇ ಇದನ್ನು ಹರಿಬಿಟ್ಟಿರುವುದು ದುರದೃಷ್ಟಕರ” ಎಂದವರು ಸ್ಪಷ್ಟನೆ ನೀಡಿದ್ದಾರೆ.

ತನ್ನ ವೈಯಕ್ತಿಕ ವಿಚಾರಕ್ಕೆ ಕುಟುಂಬವನ್ನು ಎಳೆದು ತಂದಿರುವುದಕ್ಕೆ ರಶ್ಮಿಕಾ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, “ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲರು? ಈ ವಿಷಯಕ್ಕೆ ಸಂಬಂಧವೇ ಇಲ್ಲದ ನನ್ನ ಕುಟುಂಬದವರನ್ನು ಮುಜುಗರಕ್ಕೆ ದೂಡಲಾಗಿದೆ. ಇದು ಗಂಭೀರ ಉಲ್ಲಂಘನೆ ಮತ್ತು ಮಾನಹಾನಿಕರ ಕೃತ್ಯ,” ಎಂದು ಕಿಡಿಕಾರಿದ್ದಾರೆ.

ರಶ್ಮಿಕಾ ನೇರ ಎಚ್ಚರಿಕೆ:

ಕಳೆದ ಎಂಟು ವರ್ಷಗಳಿಂದ ನನ್ನ ಮೇಲೆ ದಾಳಿಯಾದಾಗ ನಾನು ಸುಮ್ಮನಿದ್ದೆ. ಆದರೆ ಈಗ ಬೇರೆಯವರನ್ನು ಈ ವಿವಾದಕ್ಕೆ ಎಳೆದು ತಂದಾಗ ನಾನು ಸುಮ್ಮನಿರಲು ಸಾಧ್ಯವಿಲ್ಲ. ನನ್ನ ಜೀವನ ಹೇಗಿರಬೇಕು ಎಂದು ನಿರ್ಧರಿಸಲು ಈ ಜನರಿಗೆ ಯಾವುದೇ ಹಕ್ಕಿಲ್ಲ. ನಮ್ಮ ಜೀವನ ನಮಗೆ ಸೇರಿದ್ದು, ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುತ್ತೇವೆ,” ಎಂದು ಖಡಕ್ ಆಗಿ ಹೇಳಿದ್ದಾರೆ.

ತನ್ನ ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ರಶ್ಮಿಕಾ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸದ್ಯ ರಶ್ಮಿಕಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles