ನ್ಯೂಸ್ ನಾಟೌಟ್ : ಇದೆಂಥಾ ವಿಪರ್ಯಾಸ, ಗರ್ಭದಲ್ಲಿ 5 ತಿಂಗಳ ಮಗುವನ್ನು ಇಟ್ಟುಕೊಂಡು ಗರ್ಭಿಣಿಯೋರ್ವಳು ಡಿಸೇಲ್ ಸುರಿದುಕೊಂಡು ಆತ್ಮತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ನಯನ (19), ಆತ್ಮತ್ಯೆ ಮಾಡಿಕೊಂಡ ಗರ್ಭಿಣಿ.
ಕಳೆದ ಒಂದೂವರೆ ವರ್ಷದ ಹಿಂದೆ ಗ್ರಾಮದ ನಾಗರಾಜುನನ್ನು ಮದುವೆ ಆಗಿದ್ದ ಈಕೆ ಖುಷಿ ಖುಷಿಯಾಗಿದ್ದಳು.ಆರಂಭದಲ್ಲಿ ಇವರಿಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಇತ್ತೀಚೆಗೆಷ್ಟೆ ನಯನ ತನ್ನ ಅತ್ತೆ ಜತೆ ಗಲಾಟೆ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಅದಾದ ಬಳಿಕ ಮನೆಯಲ್ಲಿ ನಿತ್ಯ ಗಲಾಟೆ ಶರುವಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ಕೌಟುಂಬಿಕ ಕಲಹ ಹೆಚ್ಚಾದ ಹಿನ್ನೆಲೆ ಮನನೊಂದ ನಯನ ಕಳೆದ ರಾತ್ರಿ ದುಡುಕಿನ ನಿರ್ಧಾರ ತೆಗೆದುಕೊಂಡು ಮೈ ಮೇಲೆ ಡೀಸೆಲ್ ಸುರಿದುಕೊಂಡು ನಂತರ ಬೆಂಕಿ ಹಚ್ಚಿಕೊಂಡಿದ್ದಾಳೆ.
ಬೆಂಕಿಯ ಕೆನ್ನಾಲಿಗೆಗೆ ತೀವ್ರವಾಗಿ ಗಾಯಗೊಂಡ ನಯನ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಪುಟ್ಟ ಕಂದಮ್ಮನನ್ನು ಪ್ರಪಂಚಕ್ಕೆ ಪರಿಚಯಿಸುವ ಕನಸು ಕಂಡಿದ್ದ, ನಯನ ಅದ್ಯಾಕೆ ಕೆಟ್ಟ ನಿರ್ಧಾರ ಕೈಗೊಂಡಳೋ ಗೊತ್ತಿಲ್ಲ. ಗರ್ಭದಲ್ಲಿದ್ದ ಮಗುವನ್ನೂ ಲೆಕ್ಕಿಸದೇ, ಕರುಳ ಬಳ್ಳಿಯಲ್ಲೇ ಮಗುವನ್ನ ಸಾಯಿಸಿ ತಾನೂ ಪ್ರಾಣ ಬಿಟ್ಟಿದ್ದಾಳೆ.













