7ನೇ ಮದುವೆಗೆ ತಂದೆ ರೆಡಿ; ದಯವಿಟ್ಟು ತಡೆಯಿರಿ ಎಂದು ಪೊಲೀಸ್ ಮೊರೆ ಹೋದ ಪುತ್ರ!

ನ್ಯೂಸ್ ನಾಟೌಟ್ : 55 ವರ್ಷದ ತನ್ನ ತಂದೆ ಏಳನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಅದನ್ನು ತಡೆಯುವಂತೆ ಅಹರೌಲಾ ಠಾಣೆಗೆ ಅಪ್ರಾಪ್ತ ಮಗ ಅರ್ಜಿ ಸಲ್ಲಿಸಿದ್ದಾನೆ. ತಂದೆ ಮದುವೆಗಾಗಿ ಜಮೀನು ಮಾರಾಟ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೂಡ ಪುತ್ರ ಆರೋಪಿಸಿದ್ದಾನೆ.ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಆಜಂಘಡ್ ಜಿಲ್ಲೆಯ ಅಹರೌಲಾ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಇದೇ ವೇಳೆ ತಂದೆಯ ಹೇಳಿಕೆಯ ಪ್ರಕಾರ, ತನ್ನ ಮಗ ತನ್ನ ಮಾತು ಕೇಳುವುದಿಲ್ಲ. ಅದಕ್ಕಾಗಿ ತಾನು ಈ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಅವರು ಇದುವರೆಗೆ ಆರು ಮದುವೆ ಮಾಡಿಕೊಂಡಿರುವುದನ್ನೂ ಒಪ್ಪಿಕೊಂಡಿದ್ದಾರೆ.

ಈ ಘಟನೆ ಸ್ಥಳೀಯವಾಗಿ ಚರ್ಚೆಯ ವಿಷಯವಾಗಿದೆ. ಸ್ಥಳೀಯ ಪೊಲೀಸರ ಪ್ರಕಾರ, ಈ ಪ್ರದೇಶದ ಒಂದು ಗ್ರಾಮದ ಅಪ್ರಾಪ್ತ ವಯಸ್ಕ ಬಾಲಕ ಶನಿ ಮೌರ್ಯ ತನ್ನ ತಂದೆ ಅಮರ್ಜೀತ್ ಮೌರ್ಯ ಏಳನೇ ಮದುವೆ ಮಾಡಲು ಸಿದ್ಧರಾಗಿದ್ದಾರೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದಾನೆ.

ಮಗನ ಪ್ರಕಾರ, ತನ್ನ 55 ವರ್ಷದ ತಂದೆ ಈಗಾಗಲೇ ಆರು ಮದುವೆ ಮಾಡಿಕೊಂಡಿದ್ದು, ಈಗ ಏಳನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ. ತನ್ನ ತಾಯಿಯನ್ನು ತಂದೆ ಮೂರನೇ ಮದುವೆ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಎರಡು ಮದುವೆಗಳು ಆಗಿದ್ದವು ಎಂದು ಅವನು ಹೇಳಿದ್ದಾನೆ. ಒಟ್ಟಿನಲ್ಲಿ ಈಗಾಗಲೇ ಆರು ಮದುವೆಗಳು ನಡೆದಿವೆ.

ಪ್ರಾಥಮಿಕ ತನಿಖೆಯಲ್ಲಿ ವಾರಸತ್ವ ಮತ್ತು ಜಮೀನು ಹಂಚಿಕೆ ಕುರಿತ ವಿವಾದವಿದೆ ಎಂಬುದು ಕಂಡುಬಂದಿದೆ. ಆದರೂ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಮುಂದೆ ಹೊರಬರುವ ಮಾಹಿತಿಯ ಆಧಾರದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

Latest Articles