ನ್ಯೂಸ್ ನಾಟೌಟ್: ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನ ರಾಜಾರಾಂಪುರ ದೊಡ್ಡಡ್ಕದಲ್ಲಿ 45ನೇ ವರ್ಷದ ಆದಿಬ್ರಹ್ಮ ಮೊಗೇರ್ಕಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವ ಮಾ.21 ಹಾಗೂ ಮಾ.22ರಂದು ನಡೆಯಲಿದೆ.
ಮಾ.21ರಂದು ಬೆಳಗ್ಗೆ 7ಕ್ಕೆ ಸ್ಥಳ ಶುದ್ಧೀಕರಣ, ಬೆಳಗ್ಗೆ ಗಂಟೆ 8ರಿಂದ 7 ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 2 ರಿಂದ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ 8.30ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 9ರಿಂದ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ರಾತ್ರಿ ಗಂಟೆ 12ಕ್ಕೆ ಮಾಯೆದ ದೇವಿ ತನ್ನಿಮಾನಿ ಗರಡಿ ಇಳಿಯುವುದು, ರಾತ್ರಿ ಗಂಟೆ 1.30ಕ್ಕೆ ಬಟ್ಟಲು ಕಾಣಿಕೆ ಹೂವಿನ ಹಾರ ಅರ್ಪಿಸುವುದು, ರಾತ್ರಿ ಗಂಟೆ 2.30ಕ್ಕೆ ಮೊಗೇರ ಪೂಜಾರಿಗಳ ದರ್ಶನ ಸವಾರಿ, ರಾತ್ರಿ ಗಂಟೆ 3.30ರಿಂದ ಹರಿಕೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮರುದಿನ ಮಾ.22ರಂದು ಬೆಳಗ್ಗೆ 7ರಿಂದ ಶ್ರೀ ಸ್ವಾಮಿ ಕೊರಗಜ್ಜನ ನೇಮೋತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.













