ನ್ಯೂಸ್ ನಾಟೌಟ್: ಸುಳ್ಯದಲ್ಲಿ ಇತ್ತೀಚೆಗೆ ಹೊಸದಾಗಿ ಆರಂಭವಾಗಿರುವ ಅನಂತರಾಜ್ ಮಾಯ್ಪನ ಮತ್ತು ಧನ್ಯ ಅನಂತರಾಜ್ ದಂಪತಿಗಳ ಮಾಲೀಕತ್ವದ ರಿಷಿ ಫ್ಯಾನ್ಸಿ & ಟಾಯ್ಸ್ ಸಂಸ್ಥೆಯ ಲಕ್ಕಿ ಕೂಪನ್ ಡ್ರಾ ಮಾ.7ರಂದು ನಡೆಯಿತು.

ಹೇಮಂತ್ ಸಂಪಾಜೆ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸುಳ್ಯದ ಮುದ್ದು ಮಕ್ಕಳ ಶಾಲೆ ಅಂಜಲಿ ಮೊಂಟೆಸ್ಸರಿಯ ಸಂಚಾಲಕಿ ಗೀತಾಂಜಲಿಯವರು ಚಿನ್ನದ ಪದಕ ವಿಜೇತ ಅದೃಷ್ಟಶಾಲಿಯ ಕೂಪನ್ ತೆಗೆದರು. ಕವಿತಾ ಬಿಎಂ (ಕೂಪನ್ ನಂಬರ್ – 1096) ಚಿನ್ನದ ನಾಣ್ಯದ ಅದೃಷ್ಟಶಾಲಿಯಾಗಿ ಹೊರಹೊಮ್ಮಿದರು. ಸುಳ್ಯದ ನ್ಯಾಯವಾದಿ ದಿನೇಶ್ ಮಡಪ್ಪಾಡಿಯವರು 1ನೇ ಆಕರ್ಷಕ ಬಹುಮಾನದ ವಿಜೇತರ ಚೀಟಿಯನ್ನು ಎತ್ತಿದರು, ಇದರಲ್ಲಿ ಶರತ್ ಮೆಸ್ಕಾಂ (ಕೂಪನ್ ನಂಬರ್-1220) ವಿಜೇತರಾದರು. 2ನೇ ಆಕರ್ಷಕ ಬಹುಮಾನದ ಚೀಟಿಯನ್ನು ಸುಳ್ಯದ ಜನಪ್ರಿಯ ಬಟ್ಟೆ ಮಳಿಗೆ ‘ದೀಕ್ಷಾ’ ಮಾಲೀಕರಾಗಿರುವ ಮಾಧವ ರಾವ್ ನೆರವೇರಿಸಿಕೊಟ್ಟರು, ಈ ಕೂಪನ್ ನ ಲಕ್ಕಿ ವಿಜೇತರಾಗಿ ರೇವತಿ ರವೀಂದ್ರ (ಕೂಪನ್ ನಂಬರ್: 1407) ಹೊರಹೊಮ್ಮಿದರು. ಕೊನೆಯ ಅದೃಷ್ಟಶಾಲಿಯ ಚೀಟಿಯನ್ನು ಕಲರ್ ಥೆರಪಿಯ ಹೊನ್ನಪ್ಪ ಗೌಡ ಎತ್ತಿದರು, ಇದರ ಲಕ್ಕಿ ವಿಜೇತರಾಗಿ ರೋಶಿನಿ (ಕೂಪನ್ ನಂಬರ್ : 1325) ಆಯ್ಕೆಯಾದರು. ಗೋಪಣ್ಣ ಚೂಂತಾರ್, ಶರತ್ ಕುಡೆಕಲ್ಲು, ಮಹೇಶ್ ರಮಾನಂದ ರೈ ಜಟ್ಟಿಪಳ್ಳ, ಜಯಪ್ರಕಾಶ್, ಮಧುಶ್ರೀ ಮಡಪ್ಪಾಡಿ, ಶ್ರಾವ್ಯ ಉಪಸ್ಥಿತರಿದ್ದರು.













