39 C
Sullia
Tuesday, March 10, 2026

ಕಲ್ಚರ್ಪೆ ತ್ಯಾಜ್ಯ ವಿಲೇವಾರಿ, ನಗರ ಪಂಚಾಯತ್ ಕಸದ ರಾಶಿ ಬಗ್ಗೆ ಧ್ವನಿ ಎತ್ತಿದ ಕೆಆರ್ ಎಸ್ ಪಕ್ಷ, ಸುಳ್ಯ ಉಪತಹಶೀಲ್ದಾರ್ ಗೆ ಮನವಿ ಸಲ್ಲಿಕೆ

ನ್ಯೂಸ್ ನಾಟೌಟ್: ಕಳೆದ ಹಲವು ವರ್ಷಗಳಿಂದ ಸಮಸ್ಯೆಯ ಆಗರವಾಗಿ ಬೆಳೆದಿರುವ ಕಲ್ಚರ್ಪೆ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಮತ್ತು ನಗರ ಪಂಚಾಯತ್ ಬಳಿ ಹಾಕಲಾಗಿರುವ ಕಸದ ರಾಶಿ ಇದರ ವಿರುದ್ಧ ಕೆಆರ್ ಎಸ್ ಪಕ್ಷದ ಸುಳ್ಯ ತಾಲೂಕು ಸಮಿತಿ ಧ್ವನಿ ಎತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಬಗ್ಗೆ ಸುಳ್ಯ ಉಪತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಆಡಳಿತವು ಜಿಲ್ಲೆಯ ಅಭಿವೃದ್ಧಿ ಮತ್ತು ಜನಸಾಮಾನ್ಯರ ಅನುಕೂಲಕ್ಕಾಗಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಸಭೆಗಳನ್ನು ಆಯೋಜಿಸುವ ಕ್ರಮವಿದ್ದು, ಇನ್ನು ಮುಂದೆ ನಡೆಯುವಂತಹ ಎಲ್ಲಾ ಸಭೆಗಳಿಗೆ ನಮ್ಮ ಪಕ್ಷದ ಪ್ರತಿನಿಧಿಗಳನ್ನೂ ಆಹ್ವಾನಿಸಬೇಕೆಂದು ವಿನಂತಿಸಲಾಯಿತು. ಸುಳ್ಯ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹಾಗೂ ದೌರ್ಜನ್ಯ ಕಂಡಲ್ಲಿ ಕೂಡಲೇ ಕೆಆರ್ಎಸ್ ಪಕ್ಷದ ಪದಾಧಿಕಾರಿಗಳನ್ನು ಸಂಪರ್ಕಿಸಲು ವಿನಂತಿಸಲಾಗಿದೆ.

ಅಧ್ಯಕ್ಷ D.M ಶಾರಿಖ್ (9480313905), ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಕ್ಬಲ್ (9591674414), ಕಾರ್ಯದರ್ಶಿ M.R ದಿನೇಶ್ (9448869735), ಕಾರ್ಯದರ್ಶಿ ನವೀನ್ ಫೇರವೋ (9741160558) ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles