ನ್ಯೂಸ್ ನಾಟೌಟ್ : ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್ ಹೇಳಿಕೆಗೆ ಐಆರ್‌ಜಿಸಿ ಪಡೆ ಪ್ರತಿಕ್ರಿಯೆ ನೀಡಿದೆ. ಯುದ್ಧ ನಿಲ್ಲಿಸೋ ನಿರ್ಧಾರ ಅಮೆರಿಕದ್ದಲ್ಲ ಅದು ಏನಿದ್ದರೂ ನಮ್ಮ ನಿರ್ಧಾರ ಎಂದು ಇರಾನ್‌ನ ಐಆರ್‌ಜಿಸಿ (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ (Donald Trump) ತಿರುಗೇಟು ನೀಡಿದೆ.
ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್ ಹೇಳಿಕೆಗೆ ಐಆರ್‌ಜಿಸಿ ಪಡೆ ಪ್ರತಿಕ್ರಿಯೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ, ಈ ಪ್ರದೇಶದಿಂದ ಒಂದು ಲೀಟರ್ ತೈಲವನ್ನೂ ರಫ್ತು ಮಾಡಲು ಇರಾನ್ ಅನುಮತಿಸುವುದಿಲ್ಲ ಎಂದು ಐಆರ್‌ಜಿಸಿ ಎಚ್ಚರಿಕೆ ನೀಡಿದೆ. ಇದು ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ಭಾರೀ ಹೊಡೆತಕೊಡಲಿದೆ.
ಸೋಮವಾರ ಅಮೇರಿಕನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಟ್ರಂಪ್, ಇರಾನ್ ಯುದ್ಧವು ಸಾಕಷ್ಟು ಪೂರ್ಣಗೊಂಡಿದೆ ಎಂದಿದ್ದರು. ಇದಾದ ಕೆಲವೇ ಹೊತ್ತಲ್ಲಿ ನಾವು ಸಂಪೂರ್ಣ ಗೆದ್ದಿಲ್ಲ. ಇರಾನ್ ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಸೋಲುವವರೆಗೂ ಯುದ್ಧ ಮುಂದುವರಿಯುತ್ತದೆ ಎಂದಿದ್ದರು.
ಟ್ರಂಪ್ ಹೇಳಿಕೆಗಳಿಗೆ IRGC ನೇರ ಪ್ರತಿಕ್ರಿಯೆ ನೀಡಿದೆ. ಸಂಘರ್ಷ ಹೇಗೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ವಾಷಿಂಗ್ಟನ್ ಅಲ್ಲ, ಟೆಹ್ರಾನ್ ನಿರ್ಧರಿಸುತ್ತದೆ. ಟ್ರಂಪ್ ಹೇಳಿಕೆ ಅಸಂಬದ್ಧ ಎಂದು IRGC ವಕ್ತಾರರು ಹೇಳಿಕೊಂಡಿದ್ದಾರೆ













