ನ್ಯೂಸ್ ನಾಟೌಟ್ : ಒಂದು ಕಡೆಯಲ್ಲಿ ಇರಾನ್ – ಇಸ್ರೇಲ್ ನಡುವೆ ಜಾಗತಿಕ ಯುದ್ದ ನಡೆಯುತ್ತಿದೆ. ಇದರ ದುಷ್ಪರಿಣಾಮ ಎಂಬಂತೆ ಸರಿಯಾಗಿ ಗ್ರಾಹಕರಿಗೆ ಸಿಲಿಂಡರ್ ದೊರೆಯುತ್ತಿಲ್ಲ. ಈ ನಡುವೆ ಇಂಡೇನ್ ಗ್ಯಾಸ್ ಬಳಕೆದಾರರು ಇನ್ನು ಮುಂದೆ ತಮ್ಮ ಇಚ್ಛೆಯಂತೆ ಯಾವಾಗ ಬೇಕು ಆಗ ಬುಕ್ ಮಾಡಿಕೊಂಡು ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬ ಆದೇಶವನ್ನು ಹೊರಡಿಸಿದೆ. ಗ್ರಾಹಕರ ಬಳಿ ಇರುವ ಸಿಲಿಂಡರ್ ಗಳ ಸಂಖ್ಯೆಗೆ ಅನುಗುಣವಾಗಿ ಬುಕ್ಕಿಂಗ್ ಅವಧಿಯನ್ನು ನಿಗದಿ ಮಾಡಿದೆ. ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರ ಸಿಲಿಂಡರ್ ವಿತರಣೆಯಾದ 21 ದಿನಗಳ ನಂತರ ಮುಂದಿನ ರೀಫಿಲ್ ಬುಕ್ ಮಾಡಲು ಅವಕಾಶವಿರುತ್ತದೆ. ಎರಡು ಸಿಲಿಂಡರ್ ಹೊಂದಿರುವ ಗ್ರಾಹಕರು ಒಂದು ಸಿಲಿಂಡರ್ ಖಾಲಿಯಾದ ನಂತರ ಮುಂದಿನ ಬುಕ್ಕಿಂಗ್ ಮಾಡಲು ಕನಿಷ್ಠ 30 ದಿನಗಳ ಅಂತರವಿರಬೇಕು. ಜೊತೆಗೆ DAC, ಬಯೋಮೆಟ್ರಿಕ್ ಇ -ಕೆವೈಸಿ ,ಆಧಾರ್ ದೃಢೀಕರಣ ಪೂರ್ಣಗೊಳಿಸುವುದು ಅಗತ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.













