ಕ್ರೈಂ

ಮಂಗಳೂರು: ಬಾಲಕಿಯ ಕೊಲೆ ಪ್ರಕರಣ, ನಾಲ್ವರ ಬಂಧನ, ಕೊಲೆಗೂ ಮೊದಲು ನಡೆದಿತ್ತು ಸಾಮೂಹಿಕ ಅತ್ಯಾಚಾರ

205
Spread the love

ಮಂಗಳೂರು: ನಗರದ ಹೊರ ವಲಯದ ಉಳಾಯಿಬೆಟ್ಟು ಟ್ರೈಲ್ಸ್ ಫ್ಯಾಕ್ಟರಿಯಲ್ಲಿ  ಕೆಲಸಕ್ಕಿದ್ದ ಜಾರ್ಖಂಡ್ ಮೂಲದ ಕುಟುಂಬದ 8 ವರ್ಷ ವಯಸ್ಸಿನ ಬಾಲಕಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆಗೂ ಮುನ್ನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಜಯಸಿಂಗ್,  ಮುಖೇಶ್ ಸಿಂಗ್, ಮನೀಶ್ ತಿರ್ಕಿ ಹಾಗೂ ಮುನೀಮ್ ಸಿಂಗ್ ಬಂಧಿತ ಆರೋಪಿಗಳಾಗಿದ್ದು, ಇವರ ಪೈಕಿ ಮೂವರು ಮಧ್ಯಪ್ರದೇಶ ಮೂಲದವರಾಗಿದ್ದು, ಓರ್ವ ಜಾರ್ಖಂಡ್ ರಾಜ್ಯದವನು ಎಂದು ತಿಳಿದು ಬಂದಿದ್ದು, ಆರೋಪಿಗಳೆಲ್ಲರೂ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.

See also  ಸುಳ್ಯ: ನಿವೃತ್ತ ಫಾರೆಸ್ಟ್ ಆಫೀಸರ್ ಪದ್ಮಯ್ಯ ಗೌಡ ನಿಧನ, ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ
  Ad Widget   Ad Widget   Ad Widget