ನ್ಯೂಸ್ ನಾಟೌಟ್ : ಇರಾನ್-ಇಸ್ರೇಲ್ ಯುದ್ಧ ಬಿಕ್ಕಟ್ಟಿನ ಎಫೆಕ್ಟ್ ಭಾರತದ ಮೇಲೂ ಆಗಿದೆ. ಅನಿಲ ಹಾಗೂ ತೈಲ ಬೆಲೆಗಳು ಹೆಚ್ಚಳವಾಗುವ ಸಾಧ್ಯತೆ ಇದೆ.
ಬೆಲೆ ಏರಿಕೆ ಭೀತಿಯಲ್ಲೇ ಗ್ರಾಹಕರು ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಖರೀದಿ ಮಾಡ್ತಿದ್ದಾರೆ. ಕೆಲ ರಾಜ್ಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಲಿಂಡರ್‌ಗಳನ್ನು ಖರೀದಿಸುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಡಬಲ್ ಸಿಲಿಂಡರ್ ಖರೀದಿದಾರರಿಗೆ ಹೊಸ ನಿರ್ಬಂಧಗಳ ಘೋಷಣೆ ಮಾಡಲಾಗಿದೆ.
ಇಸ್ರೇಲ್-ಇರಾನ್ ಯುದ್ಧದಿಂದಾಗಿ ಭಾರತದಲ್ಲಿ ಅನಿಲ ಕೊರತೆ ಉಂಟಾಗುವ ಅಪಾಯವಿದೆ. ಪರಿಣಾಮವಾಗಿ, ಬೆಲೆಗಳು ಮತ್ತಷ್ಟು ಹೆಚ್ಚಾಗುವ ಭಯದಿಂದ ಸಾರ್ವಜನಿಕರು ಅಗತ್ಯಕ್ಕಿಂತ ಹೆಚ್ಚಿನ ಸಿಲಿಂಡರ್‌ಗಳನ್ನು ಖರೀದಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಅದರಲ್ಲೂ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ದಿನಕ್ಕೆ ಸರಾಸರಿ ಒಂದು ಲಕ್ಷ ಸಿಲಿಂಡರ್ ಗಳು ಬುಕ್ ಆಗುತ್ತಿದ್ದು, ಪ್ರಸ್ತುತ ಒಂದೂವರೆ ಲಕ್ಷ ಸಿಲಿಂಡರ್ ಗಳು ಬುಕ್ ಆಗುತ್ತಿವೆ.
ಪರಿಣಾಮವಾಗಿ, ಸಿಲಿಂಡರ್‌ಗಳ ಕೃತಕ ಕೊರತೆಯ ಅಪಾಯವಿದ್ದು, ತೈಲ ಕಂಪನಿಗಳು ಬುಕಿಂಗ್‌ಗೆ ಕೆಲವು ನಿರ್ಬಂಧಗಳನ್ನು ವಿಧಿಸಿವೆ.ಅದರಂತೆ, ಕೋಲ್ಕತ್ತಾದಲ್ಲಿ ಸಿಲಿಂಡರ್ ಖರೀದಿಸಿದ ನಂತರ, ಮತ್ತೊಂದು ಸಿಲಿಂಡರ್ ಬುಕ್ ಮಾಡುವ ಮೊದಲು 21 ದಿನಗಳು ಕಾಯಬೇಕು ಎಂದು ಆದೇಶ ಪ್ರಕಟಣೆ ಹೊರಡಿಸಿದೆ. ಇತರ ರಾಜ್ಯಗಳಲ್ಲೂ ಇದೇ ನಿಯಮ ಜಾರಿಗೆ ಬರೋ ಸಾಧ್ಯತೆ ಇದೆ.
ಸಿಲಿಂಡರ್ ಗಳ ಕೊರತೆ ಸದ್ಯಕ್ಕೆ ಇಲ್ಲ. ಸಾರ್ವಜನಿಕರು ಭಯಭೀತರಾಗಬಾರದು ಮತ್ತು ಹೆಚ್ಚು ಪ್ರಮಾಣದಲ್ಲಿ ಸಿಲಿಂಡರ್ ಖರೀದಿ ಬೇಡ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಜನರಲ್ ಮ್ಯಾನೇಜರ್ ಕೆ.ಎಂ. ಠಾಕೂರ್ ಸಲಹೆ ನೀಡಿದ್ದಾರೆ.













