ನ್ಯೂಸ್ ನಾಟೌಟ್ : ಆನೆಗಳ ಹಿಂಡು ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿಯನ್ನು ನಾಶಪಡಿಸಿದ ಘಟನೆ ಸಂಪಾಜೆ ಗ್ರಾಮದಲ್ಲಿ ವರದಿಯಾಗಿದೆ.ಸಂಪಾಜೆ ಗ್ರಾಮದ ಕರುಣಾಕರರವರ ಎಸ್.ಪಿ ಅವರ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ತೋಟಕ್ಕೆ ದಾಳಿ ನಡೆಸಿದ ಆನೆಗಳು ಅಡಿಕೆ,ತೆಂಗು,ಬಾಳೆ ಇತರ ಬೆಳೆಗಳನ್ನು ನಾಶ ಪಡಿಸಿವೆ ಎಂದು ತಿಳಿದು ಬಂದಿದೆ. ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿದ್ದು ರೈತರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.













