27.7 C
Sullia
Sunday, March 8, 2026

ಯಶ್ ತಾಯಿ ಪುಷ್ಪರಿಂದ ಮತ್ತೊಂದು ಸಿನಿಮಾ ಘೋಷಣೆ!, ಮೂವಿ ಹೆಸರೇನು ಗೊತ್ತಾ?

ನ್ಯೂಸ್ ನಾಟೌಟ್ : ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪ ಅವರು ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ನಿರ್ಮಾಪಕಿಯಾಗಿ ಮೊದಲ ಸಿನಿಮಾ ‘ಕೊತ್ತಲವಾಡಿ’ ನಿರ್ಮಾಣ ಮಾಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಅದಾದ ಬಳಿಕ ಅನುಷ್ಕಾ ಶೆಟ್ಟಿ ನಟನೆಯ ತೆಲುಗಿನ ‘ಘಾಟಿ’ ಸಿನಿಮಾ ಅನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದರು. ಅದೂ ಸಹ ಬಾಕ್ಸ್ ಆಫೀಸ್​​ನಲ್ಲಿ ಸದ್ದು ಮಾಡಿಲ್ಲ. ಇದೀಗ ಅದೇ ಮಾತಿನಂತೆ ಮತ್ತೆ ಮರಳಿ ಬಂದಿದ್ದಾರೆ. ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವಿಜಯದಶಮಿಯಂದು ಪುಷ್ಪ ಅವರು ತಮ್ಮ ನಿರ್ಮಾಣದ ಎರಡನೇ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಮೊದಲ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀರಾಜ್ ಅವರೆ, ಪುಷ್ಪ ಅವರು ನಿರ್ಮಿಸುತ್ತಿರುವ ಎರಡನೇ ಸಿನಿಮಾ ಅನ್ನೂ ನಿರ್ದೇಶನ ಮಾಡಲಿದ್ದಾರೆ. ಅದು ಮಾತ್ರವೇ ಅಲ್ಲದೆ, ‘ಕೊತ್ತಲವಾಡಿ’ ಸಿನಿಮಾಕ್ಕೆ ಕೆಲಸ ಮಾಡಿದ್ದ ಬಹುತೇಕ ತಂತ್ರಜ್ಞರು ಪುಷ್ಪ ಅವರ ಎರಡನೇ ಸಿನಿಮಾನಲ್ಲಿಯೂ ಕೆಲಸ ಮಾಡಲಿದ್ದಾರೆ. ಆದರೆ ಕಲಾವಿದರು ಮಾತ್ರ ಕತೆಗೆ ತಕ್ಕಂತೆ ಬದಲಾಗಲಿದ್ದಾರೆ.

ಪುಷ್ಪ ಅರುಣ್ ಕುಮಾರ್ ಅವರು ನಿರ್ಮಾಣ ಮಾಡಿದ್ದ ‘ಕೊತ್ತಲವಾಡಿ’ ಸಿನಿಮಾ ಹಳ್ಳಿ ಕತೆಯನ್ನು ಹೊಂದಿದ್ದು, ಸಿನಿಮಾನಲ್ಲಿ ಪೃಥ್ವಿ ಅಂಬರ್ ನಾಯಕನಟನಾಗಿ ನಟಿಸಿದ್ದರು. ಸಿನಿಮಾದ ಟ್ರೈಲರ್ ಗಮನ ಸೆಳೆದಿತ್ತು. ಆದರೆ ಬಾಕ್ಸ್ ಆಫೀಸ್​​ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಇನ್ನೊಂದು ಸಿನಿಮಾದ ಮೂಲಕ ಮೋಡಿ ಮಾಡ್ತಾರಾ? ಕಾದು ನೋಡ್ಬೇಕು.

Related Articles

LEAVE A REPLY

Please enter your comment!
Please enter your name here

Latest Articles