ನ್ಯೂಸ್ ನಾಟೌಟ್: ಪುತ್ತೂರು ಮತ್ತು ಜಾಲ್ಸೂರು ಮಾರ್ಗ ಮಧ್ಯೆ ಬಿದ್ದು ಹೋಗಿದ್ದ ಮೊಬೈಲ್ ವಾರಿಸುದಾರರ ಕೈ ಸೇರಲಿದೆ. ನ್ಯೂಸ್ ನಾಟೌಟ್ ನಲ್ಲಿ ವರದಿ ಬಂದ ಬೆನ್ನಲ್ಲೇ ಮಾಲೀಕರು ಮಡಿಕೇರಿ ಆಂಬ್ಯುಲೆನ್ಸ್ ಚಾಲಕ ರಾಜು ಅವರನ್ನು ಸಂಪರ್ಕಿಸಿ ಗುರುತು ಹೇಳಿದ್ದಾರೆ. ಸದ್ಯ ಸಂಪ್ಯ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಇದ್ದು
ಅಲ್ಲಿಂದ ಪಡೆದುಕೊಳ್ಳುವಂತೆ ರಾಜು ಅವರು ವಾರಿಸುದಾರರಿಗೆ ತಿಳಿಸಿದ್ದಾರೆ. ಇದೇ ವೇಳೆ ನ್ಯೂಸ್ ನಾಟೌಟ್ ಸಂಸ್ಥೆಗೆ ಹಾಗೂ ಆಂಬ್ಯುಲೆನ್ಸ್ ಚಾಲಕ ಪ್ರಗತಿ ಅಚ್ಚು ಅವರಿಗೆ ರಾಜು ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.













