ನ್ಯೂಸ್ ನಾಟೌಟ್: ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ ಮಾತೃ ಸಂಸ್ಥೆ ನೆಹರೂ ಮೆಮೋರಿಯಲ್ ಕಾಲೇಜು (ಎನ್ ಎಂಸಿ) ವಿದ್ಯಾರ್ಥಿಗಳು ಮಂಗಳೂರು ವಿವಿ 2024–25ನೇ ಸಾಲಿನ ಪದವಿ ವಿಭಾಗದ ಶೈಕ್ಷಣಿಕ ಪರೀಕ್ಷೆಗಳಲ್ಲಿ ಪ್ರಚಂಡ ಸಾಧನೆಗೈದಿದ್ದಾರೆ.
ಎನ್ಎಂಸಿ ವಿದ್ಯಾರ್ಥಿಗಳು ಕಳೆದ ವರ್ಷವೂ ಉನ್ನತ ಶ್ರೇಯಾಂಕಗಳನ್ನು ಗಿಟ್ಟಿಸಿಕೊಂಡು ಕಾಲೇಜಿನ ಕೀರ್ತಿ ಪತಾಕೆಯನ್ನು ಗಗನದೆತ್ತರಕ್ಕೆ ಹಾರಿಸಿದ್ದರು. ಈ ವರ್ಷವೂ ಕಾಲೇಜಿನ ವಿದ್ಯಾರ್ಥಿಗಳು ಮಿಂಚಿರುವುದು ವಿಶೇಷ. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಜ್ಯೋತಿ ಬಿ.ಎಚ್. ಪ್ರಥಮ ರ‍್ಯಾಂಕ್ ಪಡೆದರು. ಇವರು ಅರಂತೋಡು ಗ್ರಾಮದ ಬೆದ್ರುಪಣೆ ಹರೀಶ್ ಹಾಗೂ ರುಕ್ಮಿಣಿ ದಂಪತಿಗಳ ಪುತ್ರಿ. ವಿಜ್ಞಾನ ವಿಭಾಗದಲ್ಲಿ ಸೌಮ್ಯ ಎಸ್. ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ. ಇವರು ಶ್ರೀ ಚೆನ್ನಕೇಶವ ದೇವಸ್ಥಾನದ ಅರ್ಚಕ ಶ್ರೀರಾಮ ಯು.ವಿ. ಮತ್ತು ಸುಜಾತ ವಿ. ಅವರ ಪುತ್ರಿ. ಅದೇ ವಿಭಾಗದ ರಕ್ಷಿತಾ ಕೆ. 8ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಉಬರಡ್ಕ ಮಿತ್ತೂರು ಗ್ರಾಮದ ಉದಯರವಿ ಕೆ. ಮತ್ತು ರೇಖಾ ದಂಪತಿಗಳ ಪುತ್ರಿ.
ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.













