21.6 C
Sullia
Sunday, March 8, 2026

ಮನೆಯೊಳಗಿಟ್ಟಿದ್ದ ಪೆಟ್ರೋಲ್‌ನಿಂದಾಗಿ ಭಾರಿ ಅವಘಡ, ಬೆಂಕಿಯುರಿದು ಮಾಜಿ ಯೋಧ ಸಜೀವ ದಹನ

ನ್ಯೂಸ್ ನಾಟೌಟ್ : ಮನೆಯೊಳಗಿಟ್ಟಿದ್ದ ಪೆಟ್ರೋಲ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಾಜಿ ಸಿಆರ್‌ಪಿಎಫ್‌ ಯೋಧ (CRPF Soldier) ಸಾವಿಗೀಡಾದ ಘಟನೆ ಕೊಡಗಿನ ತೋಳುರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮೃತರನ್ನು ಹೆಚ್.ಎ.ವೆಂಕಟೇಶ್(64) ಎಂದು ಗುರುತಿಸಲಾಗಿದೆ. ತೋಟದ ಯಂತ್ರಗಳ ಬಳಕೆಗೆ ತಂದಿಟ್ಟಿದ್ದ ಪೆಟ್ರೋಲ್‍ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬೆಂಕಿಯ ಕೆನ್ನಾಲಿಯಿಂದ ಹೊರ ಬರಲಾಗದೆ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.

ಮನೆಯಿಂದ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಮನೆ ಬಳಿ ಬಂದು ನೋಡಿದ್ದಾರೆ. ಈ ವೇಳೆ ಬೆಂಕಿ ನಂದಿಸಲು ಯತ್ನಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸೋಮವಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles