ನ್ಯೂಸ್ ನಾಟೌಟ್ : ಮಕ್ಕಳು ತಾಯಿ ಜತೆ ತನಗೆ ಬೇಕೆನಿಸಿದ್ದನ್ನು ಕೇಳುತ್ತಾರೆ.ಯಾಕೆಂದರೆ ತಾಯಿ ತನ್ನಾಸೆಗಳನ್ನು ಈಡೇರಿಸುತ್ತಾಳೆ ಅನ್ನುವ ಬಲವಾದ ನಂಬಿಕೆಯಿಂದ. ಆದರೆ ಇಲ್ಲೊಬ್ಬಳು ತಾಯಿ ಕೋಳಿ
ಪದಾರ್ಥ ಮಾಡಮ್ಮಾ ಎಂದ ಮಗನ ಉಸಿರನ್ನು
ಚಪಾತಿ ಲಟ್ಟುವ ಲಟ್ಟಣಿಗೆಯಿಂದ ಹೊಡೆಯುವ ಮೂಲಕ
ನಿಲ್ಲಿಸಿರುವ ಘಟನೆ ಮಹಾರಾಷ್ಟ್ರದ ಪಾಲ್ಸರ್ ಜಿಲ್ಲೆಯ ಧನ್ಸರ್ ಗ್ರಾಮದಲ್ಲಿ
ಭಾನುವಾರ (ಸೆ.28) ನಡೆದಿದೆ.
ಮೃತ ಬಾಲಕನನ್ನು ಚಿನ್ಮಯ್ ಧುಮ್ಮೆ (7) ಎಂದು ಗುರುತಿಸಲಾಗಿದೆ.
ಆರೋಪಿ ತಾಯಿ ಪಲ್ಲವಿ ಧುಮ್ಮೆ ಅವರನ್ನು ಪೊಲೀಸರು ಬಂಧಿಸಿ
ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಚಿನ್ಮಯಿ ಸಹೋದರಿ ಕೂಡ
ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಭಾನುವಾರ ಆಗಿದ್ದ ಕಾರಣ ಚಿನ್ಮಯ್ ಗೆ ಕೋಳಿ ಪದಾರ್ಥ ತಿನ್ನಬೇಕು
ಎನ್ನುವ ಅಸೆ ಹುಟ್ಟಿಕೊಂಡಿದೆ. ಅದರಂತೆ ತನ್ನ ಅಮ್ಮನ ಬಳಿ ಪ್ರೀತಿಯಿಂದ
ಅಮ್ಮ ಇವತ್ತು ಕೋಳಿ ಪದಾರ್ಥ ಮಾಡಮ್ಮಾ ಎಂದು ಅಮ್ಮನ ಬಳಿ
ಹೇಳಿದ್ದಾನೆ ಇಷ್ಟಕ್ಕೆ ಸಿಟ್ಟಾದ ತಾಯಿ ಅಡುಗೆ ಕೋಣೆಯಲ್ಲಿದ್ದ ಚಪಾತಿ
ಲಟ್ಟುವ ಲಟ್ಟಣಿಗೆಯಿಂದ ಮನಬಂದಂತೆ ಹೊಡೆದಿದ್ದಾಳೆ ಇದರಿಂದ
ಗಂಭೀರ ಗಾಯಗೊಂಡಿದ್ದ ಚಿನ್ಮಯ್ ಅಮ್ಮನ ಎದುರೇ
ಕೊನೆಯುಸಿರೆಳೆದಿದ್ದಾನೆ.
ಇನ್ನು ಘಟನೆ ನಡೆದು ಕೆಲ ಗಂಟೆಗಳ ನಂತರ ನೆರೆಮನೆಯವರಿಗೆ ಮಾಹಿತಿ
ಸಿಕ್ಕಿದೆ ಕೂಡಲೇ ಅವರು ಪಲ್ಲವಿ ಅವರ ಮನೆಗೆ ಬಂದು ಚಿನ್ಮಯ್ ಬಗ್ಗೆ
ವಿಚಾರಿಸಿದ್ದಾರೆ. ಈ ವೇಳೆ ಕೃತ್ಯ ಮುಚ್ಚಿ ಹಾಕಲು ನಾಟಕವಾಡಿದ್ದಾಳೆ. ಇದರಿಂದ ಅನುಮಾನಗೊಂಡ ನೆರೆಮನೆಯವರು ಅಡುಗೆ ಕೋಣೆಯಲ್ಲಿದ್ದ ಚಿನ್ಮಯ್ ಮೃತದೇಹವನ್ನು ನೋಡಿದಾಗ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿದೆ, ಇದರಿಂದ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.













