ನ್ಯೂಸ್ ನಾಟೌಟ್ : ಹೊಸನಗರದ ಬಸ್ ನಿಲ್ದಾಣದಲ್ಲಿ ನಟಿ ಸಮಂತಾ ರುತ್ ಪ್ರಭು ಅವರು ಹೋಳಿ ಹಬ್ಬ ಆಚರಿಸಿದ್ದಾರೆ. ‘ಮಾ ಇಂಟಿ ಬಂಗಾರಂ’ ಚಿತ್ರದ ಶೂಟಿಂಗ್ ವೇಳೆ ಅವರು ಚಿತ್ರತಂಡದ ಜೊತೆ ಸಂಭ್ರಮಿಸಿದ್ದಾರೆ.
ಮಾ ಇಂಟಿ ಬಂಗಾರಂ’ (Maa Inti Bangaram) ಸಿನಿಮಾದ ಶೂಟಿಂಗ್ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾದ ಚಿತ್ರೀಕರಣ ಕರ್ನಾಟಕದಲ್ಲಿ ನಡೆಯುತ್ತಿದೆ. ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ (Hosanagara) ತಾಲೂಕಿನಲ್ಲಿ ಶೂಟಿಂಗ್ ಬಿಡುವಿನ ವೇಳೆ ಅವರು ಗಂಡ ರಾಜ್ ನಿಡಿಮೋರು ಹಾಗೂ ಚಿತ್ರತಂಡದ ಜೊತೆ ಹೋಳಿ ಹಬ್ಬ ಆಚರಿಸಿದ್ದಾರೆ
ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟೀವ್ ಆಗಿರುವ ಸಮಂತಾ ತಮ್ಮ ಹೋಳಿ ಆಚರಣೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹೊಸನಗರದ ಬಸ್ ನಿಲ್ದಾಣದಲ್ಲಿ ಸಮಂತಾ ಅವರು ಹೋಳಿ ಗನ್ ಹಿಡಿದು ಗಂಡನಿಗೆ ಬಣ್ಣ ಹಾಕಿದ್ದಾರೆ ಈ ವಿಡಿಯೋ ವೈರಲ್ ಆಗಿದೆ.
ಮಾ ಇಂಟಿ ಬಂಗಾರಂ’ ಸಿನಿಮಾಗೆ ನಂದಿನಿ ರೆಡ್ಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಿರುಸಿನಿಂದ ಶೂಟಿಂಗ್ ನಡೆಯುತ್ತಿದೆ. ಇದೇ ಸಿನಿಮಾದಲ್ಲಿ ಕನ್ನಡದ ನಟ ದಿಗಂತ್ ಮಂಚಾಲೆ ಅವರು ನಟಿಸುತ್ತಿದ್ದಾರೆ.













