21.6 C
Sullia
Sunday, March 8, 2026

ಇರಾನ್ – ಇಸ್ರೇಲ್ ವಾರ್ ಎಫೆಕ್ಟ್;ದುಬಾರಿಯಾಗಲಿದೆಯಾ ಡ್ರೈಫ್ರೂಟ್ಸ್ ದರ? ವ್ಯಾಪಾರಸ್ಥರು ಹೇಳೋದೇನು?


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್ : ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದಿಂದಾಗಿ (Iran-Israel War), ಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿವೆ. ಇದರ ಎಫೆಕ್ಟ್ ರಾಜ್ಯದ ಮೇಲೂ ತಟ್ಟಿದ್ದು, ಡ್ರೈಫ್ರೂಟ್ಸ್ ಮಾರಾಟದ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ. ಎರಡೂ ದೇಶಗಳು ಪರಸ್ಪರ ದಾಳಿಗಳನ್ನು ನಡೆಸುತ್ತಿವೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲ ವಸ್ತುಗಳು ಹಾಗೂ ಪದಾರ್ಥಗಳು ದುಬಾರಿಯಾಗುತ್ತಿವೆ. ರಂಜಾನ್ ಮುಸ್ಲಿಂ ಬಾಂಧವರ ಪವಿತ್ರವಾದ ಹಬ್ಬ. ಈ ಸಮಯದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ರೋಜಾ ಮಾಡಿ ನಂತರ ಆಹಾರ ಸೇವಿಸುತ್ತಾರೆ. ಈಗಾಗಲೇ ರಂಜಾನ್ ಮಾಸದ ಉಪವಾಸ ವ್ರತ ಆರಂಭವಾದ ಹಿನ್ನೆಲೆ ನಗರದ ಮಾರುಕಟ್ಟೆಗಳಲ್ಲಿ ಡ್ರೈಫ್ರೂಟ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವ್ಯಾಪಾರ ವಹಿವಾಟು ಜೋರಾಗಿದೆ. ಆದರೆ ವಾರ್ ಹಿನ್ನೆಲೆ ಕೊಂಚ ಆತಂಕ ಎದುರಾಗಿದೆ. ಇರಾನ್, ಇಸ್ರೇಲ್‌ನಿಂದ ಬರುತ್ತಿದ್ದ ಡ್ರೈಫ್ರೂಟ್ಸ್‌ಗಳು ಬಂದ್ ಆಗಿದ್ದು, ಡ್ರೈಫ್ರೂಟ್ಸ್ ಮಾಲೀಕರಿಗೆ ದೊಡ್ಡ ಹೊಡೆತ ಬಿದ್ದಿದೆ.

ಬಹು ಮುಖ್ಯವಾಗಿ ಈ ಡ್ರೈಫ್ರೂಟ್ಸ್‌ಗಳು ಅತಿ ಹೆಚ್ಚಾಗಿ ಸೌದಿ ಅರಬ್ ಹಾಗೂ ಇರಾನ್ ಕಡೆಯಿಂದಲೇ ಬರುತ್ತಿದ್ದವು. ಆದರೆ ಯುದ್ಧದ ಪರಿಣಾಮ ನೋಡುತ್ತಿದ್ದರೆ ಮುಂದೆ ಯಾವುದೇ ಡ್ರೈಫ್ರೂಟ್ಸ್ ಸ್ಟಾಕ್‌ಗಳು ರಾಜ್ಯಕ್ಕೆ ಬರೋ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲೂ ಇದೀಗ ರಂಜಾನ್ ಹಬ್ಬ ಉಪವಾಸವಾದ ಕಾರಣ ಮುಸ್ಲಿಂ ಬಾಂಧವರು ಡ್ರೈಫ್ರೂಟ್ಸ್‌ಗಳನ್ನು ಅತಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಜೊತೆಗೆ ಬೇಡಿಕೆಯು ಹೆಚ್ಚಾಗಿ ಇದೆ. ಆದರೆ ವಾರ್ ಪರಿಣಾಮ ಡ್ರೈಫ್ರೂಟ್ಸ್‌ಗಳು ಬರೋದು ನಿಂತಿದೆ. ಸದ್ಯಕ್ಕೆ ಒಂದಷ್ಟು ಸ್ಟಾಕ್ ಇರುವ ಕಾರಣ ಕಮ್ಮಿ ರೇಟ್‌ಗೆ ಕೊಡಲಾಗುತ್ತಿದೆ. ಆದರೆ ಇನ್ನೊಂದು ವಾರ ಇದೇ ರೀತಿ ವಾರ್ ಮುಂದುವರೆದರೆ ಡ್ರೈಫ್ರೂಟ್ಸ್ ರೇಟ್ ಒನ್ ಟು ಡಬಲ್ ಆಗುತ್ತೆ ಅಂತಾರೆ ವ್ಯಾಪಾರಸ್ಥರು.

ರಂಜಾನ್ ಹಬ್ಬಕ್ಕೆ ರಸೆಲ್ ಮಾರುಕಟ್ಟೆಗೆ ವಿದೇಶದಿಂದ ಸುಮಾರು 30ಕ್ಕೂ ಹೆಚ್ಚಿನ ಬಗೆಯ ಖರ್ಜೂರಗಳು ಎಂಟ್ರಿಕೊಟ್ಟಿವೆ. ಈ ಬಾರಿ ಖರ್ಜೂರ ಸೌದಿ ಅರೇಬಿಯಾ, ಜೋರ್ಡಾನ್, ಇರಾನ್‌ನಿಂದ ಹೆಚ್ಚಿನ ಡ್ರೈಫ್ರೂಟ್ಸ್ ಬರುತ್ತಿದ್ದವು. ಆದರೆ ಈಗ ಯುದ್ಧ ನಡೆಯುತ್ತಿರುವುದರಿಂದ ಅಲ್ಲಿನ ಬಂದರಿನಲ್ಲೇ ಎಲ್ಲಾ ಸರಕುಗಳು ಸ್ಟ್ರಕ್ ಆಗಿದೆ. ಇದರಿಂದ ಮುಂಬೈ ಮತ್ತು ದೆಹಲಿಯ ದೊಡ್ಡ ಮಾರುಕಟ್ಟೆಯಲ್ಲಿ ಈಗಾಗಲೇ ಶೇಖರಣೆ ಆಗಿರೋ ಸರಕುಗಳ ಬೆಲೆ ಕೂಡ ಏರಿಕೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ನೋ ಸ್ಟಾಕ್ ಆಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. 

Related Articles

LEAVE A REPLY

Please enter your comment!
Please enter your name here

Latest Articles