27.7 C
Sullia
Sunday, March 8, 2026

16 ವರ್ಷದ ಬಾಲಕಿಗೆ ಬಲವಂತದ ಮದುವೆ ಆರೋಪ,ಬಾಲ್ಯ ವಿವಾಹ ವಿರುದ್ಧ ಕೇಸ್ ದಾಖಲು

ನ್ಯೂಸ್ ನಾಟೌಟ್ : ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ ತಿಂಗಳ 26 ನೇ ತಾರೀಖಿನಂದು ಆನೇಪಾಳ್ಯದಲ್ಲಿ 16 ವರ್ಷದ ಯುವತಿಯನ್ನು ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬಾಲಕಿಯು ಗರ್ಭಿಣಿಯಾಗಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸುವಂತೆ ಇದೀಗ ಕೆಲವರು ಒತ್ತಾಯಿಸುತ್ತಿದ್ದಾರೆ.

ಪೋಕ್ಸೊ ಕಾಯ್ದೆ, ಇತರ ಸೆಕ್ಷನ್​ಗಳ ಅಡಿ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಇದೀಗ ಬಾಲಕಿಯ ಪೋಷಕರು ಮತ್ತು ಯುವಕನ ಪೋಷಕನ್ನು ವಿಚಾರಣೆ ಮಾಡುತ್ತಿದ್ದಾರೆ. ಮುಸ್ಲಿಂ ಮುಖಂಡರ ಕೈವಾಡವೂ ಇದರಲ್ಲಿ ಇದೆ ಎಂಬಾ ಸಂಶಯ ವ್ಯಕ್ತವಾಗಿದ್ದು, ಇದರಿಂದ ಆ ದೃಷ್ಟಿಯಲ್ಲಿಯೂ ತನಿಖೆಗೆ ಅಶೋಕನಗರ ಪೊಲೀಸರು ಮುಂದಾಗಿದ್ದಾರೆ.

ಇದೀಗ ಸಾಕಷ್ಟು ವಿರೋಧಕ್ಕೆ ಕಾರಣ ವಾಗುತ್ತಿದ್ದು, ಮಕ್ಕಳ ಕಲ್ಯಾಣ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ. ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles