21.6 C
Sullia
Sunday, March 8, 2026

ಖಮೇನಿಗೂ ಚಿಕ್ಕಬಳ್ಳಾಪುರಕ್ಕೂ ಇರುವ ನಂಟೇನು? ಮಿನಿ ಇರಾನ್ ಅಲಿಪುರದಲ್ಲಿ ಭಾರೀ ಪ್ರತಿಭಟನೆ

ನ್ಯೂಸ್ ನಾಟೌಟ್ : ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಬಾಂಬ್ ದಾಳಿ ನಡೆಸಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಿದೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಅಲಿಪುರ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ನಡೆಸಿದರು. ಅಲಿಪುರವನ್ನು ‘ಮಿನಿ ಇರಾನ್’ ಎಂದೇ ಕರೆಯಲಾಗುತ್ತದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅದಕ್ಕೆ ಕಾರಣ, 1986ರಲ್ಲಿ ಅಯತೊಲ್ಲಾ ಅಲಿ ಖಮೇನಿ ಈ ಗ್ರಾಮಕ್ಕೆ ಬಂದಿದ್ದರು. ಈ ಗ್ರಾಮದಲ್ಲಿ ಅತೀ ಹೆಚ್ಚು ಶಿಯಾ ಮುಸ್ಲಿಮರಿದ್ದಾರೆ. ಅಲಿಪುರದ ಸುಮಾರು 20 ಸಾವಿರ ಜನರು ಖಮೇನಿ ಅವರನ್ನು ಧರ್ಮಗುರುವೆಂದು ಗೌರವಿಸುತ್ತಾರೆ. ಹೀಗಾಗಿ ಮಸೀದಿಯಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ, ಗ್ರಾಮಸ್ಥರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಕಂಡುಬಂದವು. ಅಯತೊಲ್ಲಾ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಮುದಾಯದವರು ಪ್ರಾರ್ಥಿಸುತ್ತಿದ್ದಾರೆ.

ಅಲಿಪುರ ಗ್ರಾಮದಲ್ಲಿ ಶಿಯಾ ಸಮುದಾಯದವರು ಸಾವಿರಾರೂ ಸಂಖ್ಯೆಯಲ್ಲಿ ಸೇರಿ ಬೃಹತ್ ಶೋಕಾಚರಣೆ ಮೆರವಣಿಗೆ ನಡೆಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles