21.6 C
Sullia
Sunday, March 8, 2026

ಗರ್ಭಿಣಿಯರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್! 5,000 ದಿಂದ 11,000 ನೇರ ಹಣ..!

ನ್ಯೂಸ್ ನಾಟೌಟ್ : ಮಗುವಿನ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಪೋಷಕರಿಗೆ ಚಿಂತೆ ಇರುವುದು ಸಹಜ. ಬಡ ಹಾಗೂ ಮಧ್ಯಮ ವರ್ಗದ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯದ ದೃಷ್ಟಿಯಿಂದ ನೆರವಾಗಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಯೇ ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

2017ರಲ್ಲಿ ಜಾರಿಗೆ ಬಂದ ಈ ಯೋಜನೆಯಡಿ, ಗರ್ಭಿಣಿಯರಿಗೆ ಸರ್ಕಾರ ನೇರವಾಗಿ ಆರ್ಥಿಕ ಸಹಾಯ ನೀಡುತ್ತದೆ. 2026ರ ಸಾಲಿನಲ್ಲಿ ಈ ಯೋಜನೆಯ ಲಾಭ ಪಡೆಯುವುದು ಹೇಗೆ? ಯಾರಿಗೆ ಎಷ್ಟು ಹಣ ಸಿಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಣ ಹೇಗೆ ಸಿಗುತ್ತದೆ? 

ಈ ಯೋಜನೆಯಡಿ ಮೊದಲ ಮಗುವಿಗೆ ತಾಯಂದಿರಿಗೆ ಒಟ್ಟು ₹5,000 ರೂಪಾಯಿ ಆರ್ಥಿಕ ನೆರವು ಸಿಗುತ್ತದೆ. ಇದನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ.

ಮೊದಲ ಕಂತು (₹3,000): ಗರ್ಭಧಾರಣೆಯ ನೋಂದಣಿ ಮಾಡಿಸಿ, ಹೆರಿಗೆಗೂ ಮುನ್ನ ಕನಿಷ್ಠ ಒಂದು ತಪಾಸಣೆ (Check-up) ಮುಗಿಸಿದ ನಂತರ 3,000 ರೂ. ನೀಡಲಾಗುತ್ತದೆ.

ಎರಡನೇ ಕಂತು (₹2,000): ಮಗುವಿನ ಜನನದ ನಂತರ ಈ ಹಣ ಖಾತೆಗೆ ಜಮೆ ಆಗುತ್ತದೆ.

ಎರಡನೇ ಮಗು ಹೆಣ್ಣಾದರೆ ಬಂಪರ್ ಆಫರ್!

ಒಂದು ವೇಳೆ ಅದೇ ತಾಯಿಗೆ ಎರಡನೇ ಮಗು ಹೆಣ್ಣಾಗಿದ್ದರೆ ಸರ್ಕಾರ ಆಕೆಗೆ ₹6,000 ರೂಪಾಯಿಗಳನ್ನು ಒಂದೇ ಕಂತಿನಲ್ಲಿ ನೀಡುತ್ತದೆ. ಅಂದರೆ, ಒಬ್ಬ ಮಹಿಳೆ ಎರಡು ಮಕ್ಕಳ (ಮೊದಲ ಮಗು + ಎರಡನೇ ಮಗು ಹೆಣ್ಣು) ಸಂದರ್ಭದಲ್ಲಿ ಒಟ್ಟು ₹11,000 ರೂಪಾಯಿಗಳ ಆರ್ಥಿಕ ನೆರವು ಪಡೆಯಬಹುದು.

ಅರ್ಹತೆಗಳೇನು?

  • ಅರ್ಜಿ ಸಲ್ಲಿಸುವ ಗರ್ಭಿಣಿಯ ವಯಸ್ಸು ಕನಿಷ್ಠ 19 ವರ್ಷ ಆಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ. ಮೀರಬಾರದು.
  • ಮಗು ಜನಿಸಿದ 270 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಫಲಾನುಭವಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್: ಅಧಿಕೃತ ವೆಬ್‌ಸೈಟ್ https://pmmvy.wcd.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಆಫ್‌ಲೈನ್: ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ಭೇಟಿ ನೀಡಿ ನೋಂದಣಿ ಮಾಡಿಸಬಹುದು.

ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು).
  • ಬ್ಯಾಂಕ್ ಪಾಸ್‌ಬುಕ್.
  • ರೇಷನ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ.
  • ತಾಯಿ ಮತ್ತು ಮಗುವಿನ ಸಂರಕ್ಷಣಾ ಕಾರ್ಡ್ (MCP Card).

Related Articles

LEAVE A REPLY

Please enter your comment!
Please enter your name here

Latest Articles