21.6 C
Sullia
Sunday, March 8, 2026

ಮಂಗಳೂರು: ಸೈಬರ್ ವಂಚಕರ ಹೆಡೆಮುರಿ ಕಟ್ಟಿದ ಪೊಲೀಸರು, ಹೈದರಾಬಾದ್ ನಲ್ಲಿ ಕುಳಿತು ಒಂದೇ ದಿನ 2 ಕೋಟಿ ಎಗರಿಸಿದ್ದ ಕಿರಾತಕರು..!

ನ್ಯೂಸ್ ನಾಟೌಟ್: ಸೈಬರ್ ವಂಚಕರ ದೊಡ್ಡ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕಿರಾತಕರ ಈ ತಂಡ ನೂರಾರು ಜನರಿಗೆ ವಂಚನೆ ನಡೆಸಿದ್ದರು ಅನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಹೈದರಾಬಾದ್ ಗೆ ತೆರಳಿ ಅಲ್ಲಿ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಓರ್ವ ಆರೋಪಿಯನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಶೇಖ್ ಕರೀಮುಲ್ಲ (27 ವರ್ಷ), ಬುಡಿದಿನ್ನೆ ವಂಶಿ (21 ವರ್ಷ), ಕ್ರಾಂತಿ ಕುಮಾರ್ (36 ವರ್ಷ), ಇಬ್ರಾಹಿಂ (35 ವರ್ಷ, ಮೂಲ್ಕಿ), ಬಡೆ ಶ್ರೀನಿವಾಸ್ (38 ವರ್ಷ) ಹಾಗೂ ಉತ್ಸಲ ಸಂತೋಷ್ ಕೃಷ್ಣ (35 ವರ್ಷ) ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ಹೆಚ್ಚಿನವರು ಆಂಧ್ರಪ್ರದೇಶ ಮತ್ತು ತೆಲಂಗಾಣದವರಾಗಿದ್ದಾರೆ. ಬಂಧಿತರಿಂದ 18 ಲ್ಯಾಪ್ ಟಾಪ್, 1 ಲ್ಯಾಪ್ ಟಾಪ್, 12 ಸಿಮ್ ಕಾರ್ಡ್, 15 ಚೆಕ್ ಬುಕ್, 12 ಬ್ಯಾಂಕ್ ಪಾಸ್ ಬುಕ್, 18 ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಮಂಗಳೂರಿನ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರನ್ನು ಇಬ್ರಾಹಿಂ ವಂಚಿಸಿದ್ದ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ದೂರ ದಾಖಲಾಗಿತ್ತು. ತನಿಖೆ ನಡೆಸಲಾಗಿ ಫೆ.26ರಂದು ಸೈಬರ್ ವಂಚಕರ ತಂಡವು ಒಂದೇ ದಿನ 2 ಕೋಟಿ ರೂ.ಗೆ ಹೆಚ್ಚಿನ ಹಣವನ್ನು ವಹಿವಾಟು ನಡೆಸಿದೆ ಎನ್ನುವ ಸ್ಫೋಟಕ ವರದಿ ಹೊರ ಬಿದ್ದಿದೆ


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles