21.6 C
Sullia
Sunday, March 8, 2026

ಈಶಾ’ಸ್ ಸ್ಪಾರ್ಕ್ಲೆ ಲೇನ್ ಮಳಿಗೆ ಶುಭಾರಂಭ, ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಹಾಸ್ಯ ನಟ ಅರವಿಂದ ಬೋಳಾರ್

ನ್ಯೂಸ್ ನಾಟೌಟ್: ಮಂಗಳೂರಿನ ಎಕ್ಕೂರು ನಡುಗುತ್ತು ಬಳಿ ಸುಸಜ್ಜಿತ ಮಂಗಳೂರು ಶೈಲಿಯ ಆರ್ಟಿಫಿಷಿಯಲ್ ಆಭರಣದ ಮಾರಾಟ ಹಾಗೂ 1 ಗ್ರಾಂ ಆಭರಣ ಬಾಡಿಗೆಯ ಭವ್ಯ ಮಳಿಗೆ ಈಶಾ’ಸ್ ಸ್ಪಾರ್ಕ್ಲೆ ಲೇನ್ (ISHA’S SPARKLE LANE) ಫೆಬ್ರವರಿ 26 ರಂದು ಶುಭಾರಂಭಗೊಂಡಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಖ್ಯಾತ ತುಳುಚಿತ್ರ ನಟ ಅರವಿಂದ ಬೋಳಾರ್ ಕಾರ್ಯಕ್ರಮದ ಉದ್ಘಾಟನೆ ಮಾಡಿಸಿದರು. ಈ ವೇಳೆ ಮಾತನಾಡಿದ ಬೋಳಾರ್ ಅವರು, ‘ಚಿನ್ನದ ಬೆಲೆ ಗಗನಕ್ಕೆ ಏರಿದ ಈ ಸಂದರ್ಭದಲ್ಲಿ ಇಂತಹ ಆರ್ಟಿಫಿಷಿಯಲ್ ಆಭರಣ ಬಾಡಿಗೆ ಹಾಗೂ ಮಾರಾಟ ಮಳಿಗೆ ಎಕ್ಕೂರು ನಲ್ಲಿ ಆರಂಭಗೊಂಡಿರುವುದು ಮಂಗಳೂರಿನ ಜನತೆಯಲ್ಲಿ ಖುಷಿ ತಂದಿದೆ’ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಪ್ರವೀಣ್ ಚಂದ್ರ ಆಳ್ವ, ‘ಬೆಳೆಯುತ್ತಿರುವ ಎಕ್ಕೂರು ವಾರ್ಡ್ ನಲ್ಲಿ ಈಶಾ’ ಸ್ ಸ್ಪಾರ್ಕ್ಲೆ ಲೇನ್ ಎಕ್ಕೂರಿಗೆ ಕಿರೀಟ ಇದ್ದಂತೆ’ ಎಂದು ಸಂತಸ ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ ಮಾಲಕರಾದ ಜಯರಾಮ್ ಶೆಟ್ಟಿ, ಜಶ್ವಲ್ ಜೇ ಶೆಟ್ಟಿ, ಪೂರ್ವಿ ಜೇ ಶೆಟ್ಟಿ, ಬೇಬಿ ಈಶಾ ಜೆ ಶೆಟ್ಟಿ, ನ್ಯಾಯಾಧೀಶ ರವೀಂದ್ರನಾಥ ರೈ ಕಸ್ವಿ ಹಸಿರು ದಿಬ್ಬಣದ ಶ್ರದ್ಧಾ ಕೇಶವ ರಾಮಕುಂಜ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಚೇತನ್ ಶೆಟ್ಟಿ ನಿರ್ವಹಿಸಿದರು.

Related Articles

LEAVE A REPLY

Please enter your comment!
Please enter your name here

Latest Articles