ನ್ಯೂಸ್ ನಾಟೌಟ್: ಪುತ್ತೂರಿನಲ್ಲಿ ಡಿಯೋರ ಡಿಸೈನ್ ಶುಭಾರಂಭಗೊಂಡಿದೆ.

ಪುತ್ತೂರು ನಗರದ ದರ್ಬೆಯಲ್ಲಿ ಹೊಸ ಸಂಸ್ಥೆ ತಲೆ ಎತ್ತಿದೆ. ಹರ್ಷ ಹೋಮ್ ಅಪ್ಲೆಯನ್ಸ್ ಮುಂಭಾಗದಲ್ಲಿ ಮೊದಲನೇ ಮಹಡಿಯಲ್ಲಿ ಈ ಡಿಸೈನ್ ಕಾರ್ಯಾರಂಭಿಸಿದೆ. ಮಡಿಕೇರಿಯ ಧನ್ಯರವರ ಮಾಲೀಕತ್ವದಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ಇಲ್ಲಿ ಮದುವೆ ಸೇರಿದಂತೆ ಎಲ್ಲ ಶುಭ ಸಮಾರಂಭಗಳಿಗೆ ಉತ್ತಮ ಗುಣ ಮಟ್ಟದ ಬಟ್ಟೆಗಳು ದೊರೆಯುತ್ತದೆ. ಅಲ್ಲದೆ ಬಾಡಿಗೆಗೆ ಕೂಡ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













