21.6 C
Sullia
Sunday, March 8, 2026

ದೈವನಿಂದನೆ ಕೇಸ್, ನಟ ರಣವೀರ್ ಸಿಂಗ್‌ಗೆ ನೋಟಿಸ್!

ನ್ಯೂಸ್ ನಾಟೌಟ್ : ದೈವ ನಿಂದನೆ ಪ್ರಕರಣದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ ನೀಡಿದರೂ ನಟನಿಂದ ಯಾವುದೇ ಪ್ರತಿಕ್ರಿಯಿ ಸಿಕ್ಕಿಲ್ಲ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬಾಲಿವುಡ್ ನಟನಿಗೆ ಈಗಾಗಲೇ‌ ಪೊಲೀಸರು ಎರಡು ನೋಟಿಸ್ ನೀಡಿದ್ದಾರೆ. ಆದರೆ, ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ಹೀಗಾಗಿ, ಹೈಗ್ರೌಂಡ್‌ ಪೊಲೀಸರು ಕಾನೂನು ಮೊರೆ ಹೋಗಲು ಮುಂದಾಗಿದ್ದಾರೆ. 

ರಿಷಬ್ ಶೆಟ್ಟಿ ನಟನೆಯ ಕಾಂತಾರ 2 ಸಿನಿಮಾದ ವಿಚಾರವಾಗಿ ಗೋವಾ ಫಿಲ್ಮ್‌ಫೇರ್ ಕಾರ್ಯಕ್ರಮದಲ್ಲಿ ರಣವೀರ್ ಮಾತನಾಡುವಾಗ ಯಟವಟ್ಟು ಮಾಡಿಕೊಂಡಿದ್ದರು. ದೈವದ ವಿಚಾರವಾಗಿ ಅವಹೇಳನ ಪದ ಬಳಕೆ ಎಂದು ಎಫ್‌ಐಆರ್ ದಾಖಲು ಮಾಡಲಾಗಿತ್ತು. ವಕೀಲ ಪ್ರಶಾಂತ್‌ ನೀಡಿದ ದೂರಿನ ಮೇರೆಗೆ‌ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕೇಸ್ ದಾಖಲಾಗಿ 20 ಕ್ಕೂ ಹೆಚ್ಚು ದಿನಗಳೇ ಕಳೆದಿದೆ.

ಪೊಲೀಸರು ಎರಡು ಬಾರಿ ನೋಟಿಸ್ ನೀಡಿದ್ದಾರೆ. ಆದರೆ, ನೋಟಿಸ್‌ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನಟ ನೀಡಿಲ್ಲ. ಮುಂಬೈನಲ್ಲಿರುವ ರಣವೀರ್ ನಿವಾಸಕ್ಕೆ ಎರಡು‌ ನೋಟಿಸ್ ನೀಡಿರುವ ಪೊಲೀಸರು. ನಟನ ವಾಟ್ಸಪ್ ಗು ನೋಟಿಸ್ ಕಳುಹಿಸಿರುವ ಪೊಲೀಸರು. ಆದ್ರೆ ಯಾವ ನೊಟೀಸ್ ಗು ನಟನಿಂದ ಡೋಂಟ್ ಕೇರ್. ಹೀಗಾಗಿ ಮತ್ತೊಮ್ಮೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. 

Related Articles

LEAVE A REPLY

Please enter your comment!
Please enter your name here

Latest Articles