21.6 C
Sullia
Sunday, March 8, 2026

ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಪಾಕಿಸ್ತಾನದ ಮಹಿಳೆಗೆ 6ನೇ ಮಗು; 11 ತಿಂಗಳಲ್ಲಿ ಎರಡು ಮಗು ಸ್ವಾಗತಿಸಿದ ಸಚಿನ್ – ಸೀಮಾ ದಂಪತಿ!

ನ್ಯೂಸ್ ನಾಟೌಟ್ : ಪಾಕಿಸ್ತಾನದಿಂದ ಬಂದು ಭಾರತದ ಸಚಿನ್ ಮೀನಾರನ್ನು ಮದುವೆಯಾಗಿದ್ದ ಸೀಮಾ ಹೈದರ್ ತಮ್ಮ ಆರನೇ ಹಾಗೂ ಸಚಿನ್ ಜೊತೆ ತಮ್ಮ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹೌದು.. ಪಾಕಿಸ್ತಾನದಿಂದ ಗಡಿ ದಾಟಿ ಭಾರತೀಯ ಪ್ರಿಯಕರ ಸಚಿನ್ ಮೀನಾನನ್ನು ಸೇರಿದ ಸೀಮಾ ಹೈದರ್ ಮತ್ತೊಮ್ಮೆ ತಾಯಿಯಾಗಿದ್ದು, 5ನೇ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ.

ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದು ಸಚಿನ್ ಜೊತೆಗಿನ ಅವರ ಎರಡನೇ ಮಗುವಾಗಿದೆ. ಈ ಮೂಲಕ ಸೀಮಾ ಹೈದರ್ ಈಗ ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ. ಖಾಸಗಿ ಆಸ್ಪತ್ರೆ ನೀಡಿದ ಮಾಹಿತಿ ಪ್ರಕಾರ, ಇದು ಸಹಜ ಹೆರಿಗೆ ಆಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

ಸಚಿನ್ ಮದುವೆಯಾಗಲು ಭಾರತಕ್ಕೆ ನುಸುಳಿದ್ದ ಸೀಮಾ:

ಇನ್ನು ಭಾರತೀಯ ಮೂಲದ ಸಚಿನ್ ಮೀನಾ ಎಂಬಾತನನ್ನು ಮದುವೆಯಾಗಲು ಸೀಮಾ ಹೈದರ್ ನೇಪಾಳ ಮೂಲಕ ಭಾರತ ಪ್ರವೇಶ ಮಾಡಿದ್ದರು.

ಪಾಕಿಸ್ತಾನಿ ಮೂಲದ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಆನ್‌ಲೈನ್‌ನಲ್ಲಿ ಪಬ್ಜಿ ಗೇಮ್ ಆಡುತ್ತಾ ಪರಸ್ಪರ ಪರಿಚಿತರಾಗಿ ಪ್ರೀತಿ ಮಾಡಲು ಶುರು ಮಾಡಿದ್ದು, ಪ್ರಿಯಕರ ಸಚಿನ್‌ಗಾಗಿ ಅವರು ನೇಪಾಳ ಮೂಲ ಅಕ್ರಮವಾಗಿ ಗಡಿದಾಟಿ ಬಂದಿದ್ದರು.

ಸೀಮಾ ಹೈದರ್‌ಗೆ ಪಾಕಿಸ್ತಾನದಲ್ಲಿ ಆಗಲೇ ಮದುವೆಯಾಗಿ ನಾಲ್ವರು ಮಕ್ಕಳಿದ್ದರು. 2023ರ ಮೇ ತಿಂಗಳಲ್ಲಿ ಆ ಮಕ್ಕಳ ಜೊತೆಗೆ ಸೀಮಾ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಳು

Related Articles

LEAVE A REPLY

Please enter your comment!
Please enter your name here

Latest Articles