21.6 C
Sullia
Sunday, March 8, 2026

ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಪ್ರಾಣವನ್ನೇ ಕಳ್ಕೊಂಡ ಯುವಕ;ಪತ್ನಿ ಸ್ಥಿತಿಯೂ ಗಂಭೀರ

ನ್ಯೂಸ್ ನಾಟೌಟ್ : ವಾಹನದ ಕಾಗದಪತ್ರಗಳು ಇಲ್ಲದ ಹಿನ್ನೆಲೆ ಪೊಲೀಸರನ್ನು ನೋಡಿ ಗಾಬರಿಯಾದ ಬೈಕ್​​ ಸವಾರ ಏಕಾಏಕಿ ವಾಹನ ತಿರುಗಿಸುವ ವೇಳೆ ಗೂಡ್ಸ್ ವಾಹನ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮರೂರು ಗ್ರಾಮದ‌ ನಟೇಶ್ (31) ಮೃತ ವ್ಯಕ್ತಿಯಾಗಿದ್ದು, ಅವರ ಪತ್ನಿ ದಿವ್ಯಾ (30) ಸ್ಥಿತಿ ಚಿಂತಾಜನಕವಾಗಿದೆ. ಅಪಘಾತದಲ್ಲಿ ದಿವ್ಯಾರ ಎರಡೂ ಕಾಲುಗಳು ಮುರಿದಿವೆ ಎನ್ನಲಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles