21.6 C
Sullia
Sunday, March 8, 2026

ಬೆಳ್ತಂಗಡಿ: ಮನೆ ಮುಂದಿನ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಸಿಕ್ಕಿತು ಪ್ಲಾಸ್ಟಿಕ್ ಕಟ್ಟು..!, ಮಕ್ಕಳು ಕಟ್ಟಿನಲ್ಲಿ ಆಟವಾಡುತ್ತಿದ್ದಂತೆ ಸ್ಫೋಟ, ಬಾಲಕನ ಕಾಲಿಗೆ ಗಾಯ

ನ್ಯೂಸ್ ನಾಟೌಟ್: ಮನೆ ಮುಂದೆ ಮಕ್ಕಳು ಆಟವಾಡುತ್ತಿದ್ದಾಗ ಅಂಗಳದಲ್ಲಿ ಬಿದ್ದಿದ್ದ ಚೆಂಡಿನಾಕಾರದ ಪ್ಲಾಸ್ಟಿಕ್ ಕಟ್ಟುವೊಂದು ಸ್ಟೋಟಗೊಂಡ ಘಟನೆ ಬೆಳ್ತಂಗಡಿಯಿಂದ ಫೆ.18ರಂದು ವರದಿಯಾಗಿದೆ. ಈ ಬಗ್ಗೆ ತಾಯಿ ಜಯಶ್ರೀ (38 ವರ್ಷ) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಜಯಶ್ರೀ ಅವರ ಮಕ್ಕಳು ಮನೆ ಮುಂದಿನ ಅಂಗಳದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅಂಗಳದಲ್ಲಿ ಚೆಂಡಿನಕಾರದ ಪ್ಲಾಸ್ಟಿಕ್ ಕಟ್ಟೊಂದು ಬಿದ್ದಿತ್ತು. ಆ ಕಟ್ಟನ್ನು ಹಿಡಿದುಕೊಂಡು ಮಕ್ಕಳು ಆಟವಾಡಿದ್ದಾರೆ. ಈ ವೇಳೆ ಕಟ್ಟು ಸ್ಫೋಟಗೊಂಡಿದೆ. ಕಲ್ಲಿನ ಚೂರುಗಳು ಚೆಲ್ಲಾಪಿಲ್ಲಿಯಾಗಿ ರಟ್ಟಿವೆ. ಈ ಪೈಕಿ ಓರ್ವ ಮಗನ ಕಾಲಿಗೆ ಗಾಯವಾಗಿದೆ. ಈ ವೇಳೆ ಪರಿಶೀಲನೆ ನಡೆಸಿದಾಗ ಯಾವುದೋ ಕಾಡು ಪ್ರಾಣಿಗಳ ಬೇಟೆಗಾಗಿ ಕಿಡಿಗೇಡಿಗಳು ಇಟ್ಟಿದ್ದು ಅದನ್ನು ನಾಯಿಗಳು ಅಲ್ಲಿಂದ ಮನೆಗೆ ತಂದು ಅಂಗಳದಲ್ಲಿ ಹಾಕಿರಬಹುದು ಎಂದು ಶಂಕಿಸಲಾಗಿದೆ. ಗಾಯಾಳು ಬಾಲಕನನ್ನು ಚಿಕಿತ್ಸೆಗಾಗಿ ಸ್ಥಳೀಯ ಅಸ್ವತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲಿ ಅ.ಕ್ರ: 09/2026, ಕಲಂ: 9(B)(1)(b) explosive Avt 1884 And 125(A) ಬಿಎನ್ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related Articles

LEAVE A REPLY

Please enter your comment!
Please enter your name here

Latest Articles