ನ್ಯೂಸ್ ನಾಟೌಟ್ : ಹೆತ್ತವರು ಶಾಲೆ ಮೆಟ್ಟಿಲೇರಲಿಲ್ಲ, ಆದರೆ ಆರ್ಥಿಕ ಸಂಕಷ್ಟದ ನಡುವೆ ಓದಬೇಕು, ನ್ಯಾಯವಾದಿಯಾಗಬೇಕು, ನ್ಯಾಯಾಧೀಶ ಹುದ್ದೆಗೇರಬೇಕೆನ್ನುವ ಕನಸು ನನಸು ಮಾಡಿದ್ದಾರೆ, ಸಂಗಾತಿಯೂ ನ್ಯಾಯವಾದಿಯಾಗಿದ್ದಾರೆ.
ಬುಧವಾರ ನ್ಯಾಯಾಂಗ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯಕ್ಕೆ 63ನೇ ರ್ಯಾಂಕ್ ಗಳಿಸಿದ ಚಿತ್ರದುರ್ಗದ ರೈತನ ಮಗ ಸುಕೇಂದ್ರ ಪಿ.ಎಂ. (33) ಬದುಕಿನ ಸಾಧನೆಯಿದು.
ವಿದ್ಯಾರ್ಥಿ ವೇತನದ ನೆರವಿನಿಂದ ಪದವಿ, ಸ್ನಾತಕೋತ್ತರ, ಕಾನೂನು ಪದವಿ ಕಲಿಕೆ ಜತೆಗೆ ಗಳಿಕೆ ಮಾಡುತ್ತಾ ಉಡುಪಿಯಲ್ಲಿ ಏಳು ವರ್ಷಗಳಿಂದ ನ್ಯಾಯವಾದಿಯಾಗಿದ್ದಾರೆ. ಚಿತ್ರದುರ್ಗದ ಮೊಳಕಾಲೂರು ತಾಲೂಕಿನ ರಾಯಪುರ ಗ್ರಾಮದ ತಂದೆ ಪೂಜಾರಿ ಮಾರಣ್ಣ, ತಾಯಿ ನಾಗೇಂದ್ರಮ್ಮ ಎರಡು ಎಕರೆ ಹೊಲದಲ್ಲಿ ಮಳೆಗಾಲಕ್ಕೆ ಶೇಂಗಾ, ಬೇಸಿಗೆಯಲ್ಲಿ ಕೊಳವೆ ಬಾವಿ ನೀರಿನಿಂದ ಈರುಳ್ಳಿ, ಮೆಣಸು ತರಕಾರಿ ಬೆಳೆಯುತ್ತಿದ್ದಾರೆ.ಕುಟುಂಬ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಹೆತ್ತವರು ಸಹಿ ಹಾಕೋದು ಕಲಿತಿದ್ದಾರೆ.
ಕಾಲೇಜಿನ ಗ್ರಂಥಾಲಯದಲ್ಲೂ ಓದಿದರು. ಕಾನೂನು ಪದವಿ ಬಳಿಕ ಹಿರಿಯ ನ್ಯಾಯವಾದಿ ಮುರಳೀಧರ ವಾರಂಬಳ್ಳಿ ಬಳಿ ಜೂನಿಯರ್ ವಕೀಲರಾಗಿ ಸೇರಿದರು.
ಒಂದು ವರ್ಷದ ಹಿಂದೆ ಮಂದಾರ್ತಿ ಮೂಲದ, ಉಡುಪಿಯ ನ್ಯಾಯವಾದಿ ಸವಿತಾ ಸಂಗಾತಿಯಾಗಿದ್ದಾರೆ. ನನಗೇನೂ ಕೆಲಸ ಮಾಡಲು ಬಿಡದೆ ನಿತ್ಯ 2-3 ಗಂಟೆ ಓದಲು ಪತ್ನಿ ನೆರವಾಗಿದ್ದಾಳೆ ಎನ್ನುವ ಅಭಿಮಾನದ ಮಾತನ್ನಾಡಲು ಸುಕೇಂದ್ರ ಮರೆಯಲಿಲ್ಲ.













