21.6 C
Sullia
Sunday, March 8, 2026

ಪ್ರೇಯಸಿಯನ್ನು ಕೊಂದು ಆಕೆಯ ಶವದ ಜೊತೆ ಸಂಭೋಗ ನಡೆಸಿದ ಪ್ರಿಯಕರ..!, ಯೂಟ್ಯೂಬ್ ನೋಡಿಕೊಂಡು ಆತ್ಮದ ಜೊತೆಗೆ ಮಾತನಾಡಲು ಯತ್ನಿಸಿದ ವಿಕೃತ ಸೈಕೋ

ನ್ಯೂಸ್ ನಾಟೌಟ್: ಪ್ರೇಮಿಯನ್ನೇ ಬರ್ಬರವಾಗಿ ಕೊ*ಗೈದು, ಆಕೆಯ ಶವದ ಪಕ್ಕವೇ ಕುಳಿತು ಮದ್ಯಪಾನ ಮಾಡಿ ನಂತರ ಮುಂಬೈಗೆ ಪರಾರಿಯಾಗಿ ಅಲ್ಲಿ ‘ಆತ್ಮ’ದ ಜೊತೆ ಮಾತನಾಡಲು ಯತ್ನಿಸಿದ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಎಂಬಿಎ ವಿದ್ಯಾರ್ಥಿನಿಯ ಪ್ರಕರಣದ ವಿವರಗಳು ಇದೀಗ ದೇಶವನ್ನೇ ಬೆಚ್ಚಿಬೀಳಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಆರೋಪಿ ಪಿಯೂಷ್ ಧಮನೋಟಿಯಾ ಎಂಬಾತನ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆತ ಬಾಯಿಬಿಟ್ಟ ಸತ್ಯಗಳು ಹಾರರ್ ಸಿನಿಮಾಗಳನ್ನೂ ಮೀರಿಸುವಂತಿದೆ. ಫೆಬ್ರವರಿ 10 ರಂದು ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಆರೋಪಿ ಪಿಯೂಷ್ ವಿದ್ಯಾರ್ಥಿನಿಯೊಂದಿಗೆ ಕೊಠಡಿಗೆ ಬಂದಿದ್ದ. ಸುಮಾರು ಎರಡೂವರೆ ಗಂಟೆಗಳ ನಂತರ ಆತ ಒಬ್ಬನೇ ಬ್ಯಾಗ್ ಹಿಡಿದುಕೊಂಡು ಹೊರಹೋಗಿರುವುದು ಕಂಡುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಕೋಣೆಯೊಳಗೆ ಹೋದ ಪಿಯೂಷ್ ಯುವತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆಕೆ ಅನಾರೋಗ್ಯದ ಕಾರಣ ಹೇಳಿ ನಿರಾಕರಿಸಿದಾಗ, ಬಲವಂತವಾಗಿ ಅತ್ಯಾ*ರ ಎಸಗಿದ್ದಾನೆ. ನಂತರ ‘ನಿನಗೊಂದು ಗಿಫ್ಟ್ ಕೊಡುತ್ತೇನೆ’ ಎಂದು ಹೇಳಿ ಆಕೆಯ ಕಣ್ಣಿಗೆ ಬಟ್ಟೆ ಕಟ್ಟಿ, ಹಗ್ಗದಿಂದ ಕೈಕಾಲುಗಳನ್ನು ಕಟ್ಟಿದ್ದಾನೆ. ಬಳಿಕ ಆಕೆಯ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿದ್ದಾನೆ. ಪ್ರಜ್ಞೆ ತಪ್ಪಿದ ಬಳಿಕ ಎದೆಗೆ ಚಾಕುವಿನಿಂದ ಇರಿದು ಕೊ* ಮಾಡಿದ್ದಾನೆ.

ಇರಿತದ ರಭಸಕ್ಕೆ ಚಾಕುವೇ ಮುರಿದು ಹೋಗಿದೆ ಎನ್ನಲಾಗಿದೆ. ಮಾನವೀಯ ಸಂಗತಿ ಎಂದರೆ, ಕೊಲೆ ಮಾಡಿದ ನಂತರ ಪಿಯೂಷ್ ಕೋಣೆಯಿಂದ ಹೊರಬಂದು ಮದ್ಯ ಖರೀದಿಸಿ ತಂದಿದ್ದಾನೆ. ಪ್ರೇಮಿಯ ಶವದ ಪಕ್ಕವೇ ಕುಳಿತು ಮದ್ಯಪಾನ ಮಾಡಿದ್ದಾನೆ. ಅಲ್ಲದೆ, ತಾನು ಮೃತದೇಹದ ಜೊತೆಯೂ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ನಂತರ ಬಟ್ಟೆ ಬದಲಿಸಿ, ಯುವತಿಯ ಶ*ವವನ್ನು ಬೆತ್ತಲೆ ಸ್ಥಿತಿಯಲ್ಲೇ ಬಿಟ್ಟು ಪರಾರಿಯಾಗಿದ್ದ.

ಇಂದೋರ್ ನಿಂದ ಮುಂಬೈಗೆ ಪರಾರಿಯಾದ ಪಿಯೂಷ್, ಪನ್ವೇಲ್ ತಲುಪಿದ್ದ. ಅಲ್ಲಿ ನಿರ್ಜನ ಪ್ರದೇಶವೊಂದಕ್ಕೆ ತೆರಳಿ ಊದಿನ ಕಡ್ಡಿಗಳನ್ನು ಹಚ್ಚಿ ವಿಚಿತ್ರವಾಗಿ ವರ್ತಿಸಿದ್ದಾನೆ. ಆತ್ಮಗಳನ್ನು ಕರೆಯುವುದು ಹೇಗೆ?” ಎಂದು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿದ್ದಾನೆ. ತಾನು ಕೊಂದ ಪ್ರೇಮಿಯ ‘ಆತ್ಮ’ದ ಜೊತೆ ಮಾತನಾಡಬೇಕು ಎಂದು ಕತ್ತಲಲ್ಲಿ ಕ್ಷಮೆ ಯಾಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles